ಕ್ರೀಡೆ

ಅತ್ಯಾಚಾರ ಪ್ರಕರಣ: ಕ್ರಿಕೆಟಿಗ ಸಂದೀಪ್‌ ಲಾಮಿಚಾನೆಗೆ 8 ವರ್ಷ ಜೈಲು ಶಿಕ್ಷೆ

0

ನೇಪಾಳದ ಕ್ರಿಕೆಟ್‌ ತಂಡದ ಮಾಜಿ ನಾಯಕ ಸಂದೀಪ್ ಲಾಮಿಚಾನೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ನೇಪಾಳ ನ್ಯಾಯಾಲಯ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಶಿಶಿರ್ ರಾಜ್ ಧಾಕಲ್ ಅವರ ಪೀಠವು ಇಂದು ವಿಚಾರಣೆ ನಡೆಸಿದ ನಂತರ ಪರಿಹಾರ ಮತ್ತು ದಂಡದೊಂದಿಗೆ 8 ವರ್ಷಗಳ ಜೈಲು ಶಿಕ್ಷೆಯ ತೀರ್ಪನ್ನು ಪ್ರಕಟಿಸಿತು.

ನೇಪಾಳ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ಕೂಡ ಆಗಿದ್ದ 24 ವರ್ಷದ ಪ್ರತಿಭಾವಂತ ಸ್ಪಿನ್ನರ್‌, 17 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿರುವ ಪ್ರಕರಣದಲ್ಲಿ 2023ರ ಅಕ್ಟೋಬರ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದರು. 

Advertisement. Scroll to continue reading.

2022ರ ಆಗಸ್ಟ್‌ನಲ್ಲಿ ಕಾಠ್ಮಂಡುವಿನ ಹೋಟೆಲೊಂದರಲ್ಲಿ ತಮ್ಮನ್ನು ಸಂದೀಪ್‌ ಲಾಮಿಚಾನೆ ಅತ್ಯಾಚಾರ ಮಾಡಿದ್ದಾರೆ ಎಂದು 17 ವರ್ಷದ ಯುವತಿಯೊಬ್ಬರು ದೂರು ದಾಖಲಿಸಿದ್ದರು. ಈ ಪ್ರಕರಣ ಸಂಬಂಧ 2023ರ ಜನವರಿಯಲ್ಲಿ ಜಾಮೀನಿನ ಮೇಲೆ ಸಂದೀಪ್‌ ಬಿಡುಗಡೆ ಆಗಿದ್ದರು. ಆದರೆ, 2023ರ ಡಿಸೆಂಬರ್‌ನಲ್ಲಿ ಅವರ ವಿರುದ್ಧದ ಆರೋಪಗಳು ಸಾಭೀತಾಗಿದ್ದವು..

ನವೆಂಬರ್‌ನಲ್ಲಿ ನಡೆದ ಟಿ 20 ಏಷ್ಯಾ ಫೈನಲ್ಸ್‌ನಲ್ಲಿ ಒಮಾನ್ ವಿರುದ್ಧ ನೇಪಾಳ ಪರ ಅವರು ಕೊನೆಯ ಬಾರಿಗೆ ಆಡಿದ್ದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com