ಕರಾವಳಿ

ಉಡುಪಿ: ನಗದು ಪುರಸ್ಕಾರ ಪಾವತಿಯಾಗದಿದ್ದಲ್ಲಿ ಮಾಹಿತಿ ನೀಡಿ

0


ಉಡುಪಿ : ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್ -2023 ರಲ್ಲಿ ಪಾಲ್ಗೊಂಡು ಪದಕ ಪಡೆದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರದ ಮೊತ್ತವನ್ನು ಸಂಬಂಧಪಟ್ಟ ಕ್ರೀಡಾಪಟುಗಳ ಖಾತೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮೂಲಕ ವರ್ಗಾಯಿಸಲಾಗಿದ್ದು, ಇದರಲ್ಲಿ ಕೆಲವು ಕ್ರೀಡಾಪಟುಗಳ ಬ್ಯಾಂಕ್ ವಿವರ ಸರಿಯಾಗಿ ನಮೂದಿಸದ ಹಾಗೂ ಬ್ಯಾಂಕ್ ಖಾತೆ ಸರಿಯಲ್ಲದ ಕಾರಣ ಹಣ ಪಾವತಿಯಾಗಿರುವುದಿಲ್ಲ.


ಆದ್ದರಿಂದ ದಸರಾ ಕ್ರೀಡಾಕೂಟ ಮುಖ್ಯಮಂತ್ರಿ ಕಪ್ -2023 ರಲ್ಲಿ ಪಾಲ್ಗೊಂಡು ಪದಕ ಪಡೆದ ಜಿಲ್ಲೆಯ ಕ್ರೀಡಾಪಟುಗಳು ತಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿ, ನಿಗದಿತ ನಗದು ಪುರಸ್ಕಾರ ಪಾವತಿಯಾಗದೇ ಇದ್ದಲ್ಲಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಇವರಿಗೆ ಮಾಹಿತಿ ನೀಡುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com