ಶಂಕರನಾರಾಯಣ : ಅಡಿಕೆ ಹೆಕ್ಕಲೆಂದು ತೋಟಕ್ಕೆ ಹೋದ ಮಹಿಳೆಯೊಬ್ಬರು ಹೊಳೆಯ ನೀರಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಹಳ್ಳಿಹೊಳೆಯಲ್ಲಿ ನಡೆದಿದೆ.
ಸುರೇಶ್ ಎಂಬವರ ಪತ್ನಿ ಮೂಕಾಂಬು (45) ಮೃತ ಮಹಿಳೆ. ಮೂಕಾಂಬು ಬೆಳಗ್ಗೆ ಮನೆಯ ತೋಟದಲ್ಲಿ ಅಡಿಕೆ ಹೆಕ್ಕುವುದಾಗಿ ಹೇಳಿ ಹೋಗಿದ್ದು, ಅಪರಾಹ್ನ 12ಗಂಟೆಯಾದರೂ ಮನೆಗೆ ಮರಳದಾಗ ಸುರೇಶ್ ಹುಡುಕಿಕೊಂಡು ತೋಟಕ್ಕೆ ಹೋಗಿದ್ದರು.
ತೋಟದ ಬದಿಯಲ್ಲಿ ಹರಿಯುವ ಹೊಳೆ ಕಟ್ಟಿನ ನೀರಿನಲ್ಲಿ ಮುಖ ಕೆಳಗಾಗಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಹೆಂಡತಿಯನ್ನು ಎಳೆದು ದಡಕ್ಕೆ ಹಾಕಿ ಉಪಚರಿಸಿದ್ದರು. ಕೂಡಲೇ ಆಸುಪಾಸಿನ ಮನೆಯವರನ್ನು ಕರೆದು ಚಿಕಿತ್ಸೆಗಾಗಿ ಹಳ್ಳಿಹೊಳೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಮೂಕಾಂಬು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
Advertisement. Scroll to continue reading.
ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.