ಉಡುಪಿ: ಟ್ರೆಡಿಂಗ್‌ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ ವೃದ್ಧರೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ನಡೆದಿದೆ.
ಅಪರಿಚಿತರು ಕಳುಹಿಸಿದ ಲಿಂಕ್ ಮೂಲಕ ವ್ಯವಹರಿಸುವ ಮೂಲಕ ವ್ಯಕ್ತಿಯೊಬ್ಬರು ಬರೋಬ್ಬರಿ 61,90,000ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಬಿ.ಚಂದ್ರಶೇಖರ ಹೆಗ್ಗೋಡ್ಲು (70) ಎಂಬವರ ಮೊಬೈಲ್‌ಗೆ ಯಾರೋ ಅಪರಿಚತ ವ್ಯಕ್ತಿಗಳು ವಾಟ್ಸಪ್‌ನಲ್ಲಿ ಸಂಪರ್ಕಿಸಿ ನಂಬಿಕೆ ಹುಟ್ಟಿಸಿ, ಲಿಂಕ್ ಕಳುಹಿಸಿದ್ದರು.
Advertisement. Scroll to continue reading.
ಇದರ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಚಂದ್ರಶೇಖರ್, ಆರೋಪಿಗಳು ತಿಳಿಸಿದಂತೆ ವಿವಿಧ ಬ್ಯಾಂಕ್ ಖಾತೆ ಗಳ ಮೂಲಕ 61.90 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದರು.
ಆದರೆ ಹೇಳಿದ ಅವಧಿಗೆ ಹೂಡಿಕೆ ಮಾಡಿದ ಹಣವಾಗಲೀ, ಲಾಭಾಂಶವಾಗಿ ನೀಡದೇ ಮೋಸ ಮಾಡಿದ್ದಾರೆ ಎಂದು ಅವರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Advertisement. Scroll to continue reading.