ಬ್ರಹ್ಮಾವರ : ಬೈಕಾಡಿಯ ನಿವಾಸಿ ಬಿ.ನಾರಾಯಣ ಕುಂದರ್ ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಸಂಜೆ ಸ್ವಗ್ರಹದಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಸಿಂಡಿಕೇಟ್ ಬ್ಯಾಂಕ್, ಉದ್ಯೋಗಿಯಾಗಿದ್ದು, ಬಾರ್ಕೂರು ಮತ್ತು ಬ್ರಹ್ಮಾವರ ಶಾಖೆಗಳಲ್ಲಿ ಕಾರ್ಯವ್ಯಸಗಿ ನಿವೃತ್ತಿಯಾಗಿದ್ದರು.
ಸ್ಥಳೀಯವಾಗಿ ಹವ್ಯಾಸಿ ಯಕ್ಷಗಾನ ತಂಡ ಕಟ್ಟಿಕೊಂಡು ಯಕ್ಷಗಾನದ ಪೋಷಕರಾಗಿಯೂ ಮತ್ತು ಯಕ್ಷಗಾನ ಕಲಾವಿದರಾಗಿ ಮಹಿಷಾಸುರನ ಪಾತ್ರದಲ್ಲಿ ಮಿಂಚಿದ್ದರು.
Advertisement. Scroll to continue reading.
ಬೈಕಾಡಿಯ ಮೊಗವೀರ ಗ್ರಾಮ
ಮಾಜಿ ಅಧ್ಯಕ್ಷರಾಗಿದ್ದು, ಬೈಕಾಡಿ ಯುವಕ ಮಂಡಲ ಮಾಜಿ ಸದಸ್ಯರಾಗಿದ್ದು, ಸ್ಥಳೀಯ ಬೈಕಾಡ್ತಿ ದೈವ ಸ್ಥಾನದಲ್ಲಿ ತಮ್ಮನ್ನು ದೇವತಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.
ಮೃತರು ಪತ್ನಿ, ಮೂರು ಹೆಣ್ಣು, ಎರಡು ಗಂಡು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Advertisement. Scroll to continue reading.