ಸಿನಿಮಾ ತಾರೆಯರ ಸಂಕ್ರಾಂತಿ ಸಂಭ್ರಮ ಹೇಗಿತ್ತು ನೋಡಿ| PHOTOS Published January 16, 2024 0 ಸಂಕ್ರಾಂತಿ ಹಬ್ಬ ಎಲ್ಲೆಡೆ ಮನೆ ಮಾಡಿತ್ತು. ತಾರೆಯರೂ ಹಬ್ಬ ಸಂಭ್ರಮಿಸಿದ್ದು,ಡಾ.ಪಾರ್ವತಮ್ಮ ರಾಜ್ಕುಮಾರ್ ಸಹೋದರನ ಪುತ್ರ ಧ್ರುವನ್ ಜೊತೆ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಸ್ವತ: ದರ್ಶನ್ ಅವರೇ ತಮ್ಮ ಫಾರ್ಮ್ ಹೌಸ್ನಲ್ಲಿರುವ ಎತ್ತುಗಳೊಂದಿಗೆ ಧ್ರುವನ್ ಜೊತೆ ತೆಗೆಸಿಕೊಂಡ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ನಟಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಯಶ್ ತಮ್ಮ ಮನೆಯಲ್ಲೇ ಸುಗ್ಗಿ ಹಬ್ಬ ಆಚರಿಸಿದ್ದಾರೆ. ಹಬ್ಬ ಆಚರಿಸಿದ ಬಳಿಕ ಅಪಾರ್ಟ್ಮೆಂಟ್ ಮೇಲೇರಿ ಗಾಳಿಪಟ ಹಾರಿಸಿದ್ದಾರೆ. ನಟಿ ಮಾಲಾಶ್ರೀ, ಆರಾಧನಾ ಕೂಡ ಸಂಕ್ರಾಂತಿ ಹಬ್ಬ ಸಂಭ್ರಮಿಸಿದ್ದಾರೆ. ಬಸವನಿಗೆ ಕಬ್ಬು, ಬಾಳೆಹಣ್ಣು ಕೊಟ್ಟಿದ್ದಾರೆ.ಗೋಲ್ಡನ್ ಸ್ಟಾರ್ ಗಣೇಶ್ ನಿವಾಸದಲ್ಲೂ ಸಂಕ್ರಾಂತಿ ಹಬ್ಬ ಸಂಭ್ರಮವಿತ್ತು. ನಟ ಶ್ರೀಮುರಳಿಯೂ ಫೋಟೋ ಹಂಚಿಕೊಂಡಿದ್ದಾರೆ. ನಟ ಧ್ರುವ ಸರ್ಜಾ ಕೂಡ ಜಾನುವಾರಗಳನ್ನು ತೊಳೆದು ಸಿಂಗರಿಸಿ, ಪೂಜೆ ಮಾಡಿ ಸಂಜೆ ಕಿಚ್ಚು ಹಾಯಿಸಿದ್ದಾರೆ. ನಿಖಿಲ್ ಕುಮಾರ್ ಸ್ವಾಮಿ ಹಬ್ಬ ಆಚರಿಸಿದ ಫೋಟೋ ಹಂಚಿಕೊಂಡಿದ್ದಾರೆ. ಅದಿತಿ ಪ್ರಭುದೇವ, ಶ್ವೇತಾ ಶ್ರೀವಾತ್ಸವ್, ರಚಿತಾ ರಾಮ್, ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಮೊದಲಾದ ನಟಿ ಮಣಿಯರು ಫೋಟೋ ಹಂಚಿಕೊಂಡಿದ್ದಾರೆ. Advertisement. Scroll to continue reading. In this article:actor, Aradhana, Darshan, dboss, Diksoochi news, Ganesh, Kannada films, Makara Sankranthi, malashri, rachita ram, srii murali, yash Click to comment You May Also Like