ಬೆಂಗಳೂರಿನಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನದ ನಡುವಿನ ಮೂರನೆ ಹಾಗೂ ಅಂತಿಮ ಟಿ20 ಪಂದ್ಯ ರೋಚಕ ಕದನದಲ್ಲೆ ಗೆಲುವಿಗಾಗಿ ಎರಡೆರಡು ಸೂಪರ್ ಓವರ್‌ಗಳ ಮೊರೆ ಹೋಗಲಾಯಿತು.
ಅಂತಿಮವಾಗಿ ಭಾರತ ಗೆಲುವಿನ ನಗೆ ಬೀರಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. 22 ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
Advertisement. Scroll to continue reading.
ಬಳಿಕ ರೋಹಿತ್ ಶರ್ಮ ಅಬ್ಬರಿಸಿದರು. 69 ಎಸೆತಗಳಲ್ಲಿ 121 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಕಲೆ ಹಾಕಿತು.
ಅಫ್ಘಾನಿಸ್ತಾನ ಕೂಡ 212 ರನ್‌ಗಳಿಸಲಷ್ಟೇ ಶಕ್ಯವಾಯಿತು. ಪಂದ್ಯ ಟೈ ಆಯಿತು. ಬಳಿಕ ಪಂದ್ಯ ನಿರ್ಣಯಿಸಲು ಸೂಪರ್ ಓವರ್ ಮೊರೆ ಹೋಗಲಾಯಿತು. ಮೊದಲ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಭಾರತದ ಗೆಲುವಿಗೆ 17 ರನ್‌ಗಳ ಗುರಿ ನೀಡಿತು. ಆದರೆ, ಭಾರತ ಭಾರತ 16 ರನ್ ಗಳಿಸಲಷ್ಟೇ ಶಕ್ಯವಾಗಿ. ಪಂದ್ಯ ಟೈ ಆಯಿತು.
ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಫ್ಘಾನಿಸ್ತಾನದ ಗೆಲುವಿಗೆ 11 ರನ್‌ಗಳ ಗುರಿ ನೀಡಿತು. ಈ ವೇಳೆ ಬೌಲಿಂಗ್ ಮಾಡಿ ಬಿಷ್ಣೋಯ್ 3 ಎಸೆತದಲ್ಲಿ 1 ರನ್ ನೀಡಿ ಎರಡು ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಜಯ ದೊರಕಿಸಿಕೊಟ್ಟರು.
Advertisement. Scroll to continue reading.