ಕರಾವಳಿ

ಪುತ್ತಿಗೆ ಶ್ರೀಗಳಿಗೆ ಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀ

0

ಉಡುಪಿ : ಗುರುವಾರ ಮುಂಜಾನೆ ನಡೆದ ಪುತ್ತಿಗೆ ಮಠದ 4ನೇ ಪರ್ಯಾಯೋತ್ಸವು ಅಪೂರ್ವ ಘಟನೆಗೆ ಸಾಕ್ಷಿಯಾಯಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಕೈಹಿಡಿದು ಸರ್ವಜ್ಞ ಪೀಠಾರೋಹಣ ಮಾಡಿಸಿ, ಕೃಷ್ಣನ ಪೂಜೆಯ ಅಧಿಕಾರವನ್ನು ಒಪ್ಪಿಸಿದರು. 

ಪುತ್ತಿಗೆ ಶ್ರೀ ನವಗ್ರಹ ಕಿಂಡಿಯಲ್ಲಿ ಶ್ರೀಕೃಷ್ಣ , ಮುಖ್ಯಪ್ರಾಣರ ದರ್ಶನ, ತೀರ್ಥಮಂಟಪದಲ್ಲಿ ಪಟ್ಟದ ದೇವರು ವಿಠಲ ಹಾಗೂ ಶ್ರೀಕೃಷ್ಣನಿಗೆ ಆರತಿ ಎತ್ತಿದರು. ಮಧ್ವ ಪ್ರತಿಮೆ ಬಳಿ ಅಕ್ಷಯಪಾತ್ರೆ, ಸಟ್ಟುಗವನ್ನು ಅದಮಾರು ಶ್ರೀವಿಶ್ವಪ್ರಿಯತೀರ್ಥರು ಹಸ್ತಾಂತರಿಸಿದರು.

ಪುತ್ತಿಗೆ ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಅದಮಾರು ಶ್ರೀವಿಶ್ವಪ್ರಿಯತೀರ್ಥರು ಕೂರಿಸಿ, ಮಧ್ವ ನಮನ ಸಲ್ಲಿಸಿದರು.

ವಿಶ್ವ ಗೀತಾ ಪರ್ಯಾಯಕ್ಕೆ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥರ ನೆರವಿಗೆ ಕೃತಜ್ಞತೆ ಸಲ್ಲಿಸಿದ ಪುತ್ತಿಗೆಶ್ರೀಗಳು ಅದಮಾರುಶ್ರೀಗಳಿಗೆ ಗಂಧೋಪಚಾರ ನೆರವೇರಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com