ಮುಂಬೈ : ನಟ ಸೈಫ್ ಅಲಿ ಖಾನ್ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಇತ್ತೀಚಿಗೆ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುವಾಗ ಸೈಫ್ ಗಾಯದ ಸಮಸ್ಯೆ ಕಾಡಿತ್ತು. ಹೀಗಾಗಿ ಮೊಣಕಾಲು ಮತ್ತು ಟ್ರೈಸ್ಪ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಲಾಗಿದೆ.
ಜೂನಿಯರ್ ಎನ್ ಟಿಆರ್ ನಟನೆಯ ‘ದೇವರ’ ಚಿತ್ರೀಕರಣದ ವೇಳೆ ಸೈಫ್ ಅವರ ಮೊಣಕಾಲು ಮತ್ತು ಭುಜಕ್ಕೆ ಗಾಯವಾಗಿದ್ದರು. ಚಿತ್ರದಲ್ಲಿನ ಆಕ್ಷನ್ ಸೀಕ್ವೆನ್ಸ್‌ನ ಚಿತ್ರೀಕರಣದ ಸಮಯದಲ್ಲಿ ಅವರಿಗೆ ಹಳೆಯ ಗಾಯದ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಟ್ರೈಸ್ಪ್ ಶಸ್ತ್ರಚಿಕಿತ್ಸೆಯಾಗಿದೆ.
Advertisement. Scroll to continue reading.
ಅಷ್ಟೇ ಅಲ್ಲ ವಿಶಾಲ್ ಭಾರದ್ವಾಜ್ ಅಭಿನಯದ ‘ರಂಗೂನ್’ ಸಿನಿಮಾದ ಶೂಟಿಂಗ್ ವೇಳೆಯೂ ಸೈಫ್ ಗಾಯಗೊಂಡಿದ್ದರು. ಅವರು ಕ್ರೇಪ್ ಬ್ಯಾಂಡೇಜ್ ಅನ್ನು ಹಲವು ಬಾರಿ ಧರಿಸಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣದ ವೇಳೆ ಅವರ ಹೆಬ್ಬೆರಳಿಗೆ ಗಾಯವಾಗಿದೆ ಎನ್ನಲಾಗಿದೆ.
Advertisement. Scroll to continue reading.