ರಾಮನಗರ : ತನ್ನ ಮಗುವಿಗೆ ಲಕ್ಷ್ಮಣ ರೇಖೆ ಕೀಟನಾಶಕ ನೀಡಿ ತಾನೂ ಸೆವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಹಾರೋಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಮಗು ಸಾವನ್ನಪ್ಪಿದ್ದು, ತಾಯಿ ಚಿಕಿತ್ಸೆ ಚೇತರಿಸಿಕೊಂಡಿದ್ದಾರೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಗೋದೂರಿನಲ್ಲಿ ಈ ಘಟನೆ ನಡೆದಿದೆ.
ದೀಕ್ಷಿತ್ ಮೃತ ಮಗು. ಪೂರ್ಣಿಮಾ ಆತ್ಮಹತ್ಯೆಗೆ ಯತ್ನಿಸಿದಾಕೆ.
Advertisement. Scroll to continue reading.
ಗಂಡ-ಹೆಂಡತಿ ಜಗಳವಾಡಿಕೊಂಡಿದ್ದರು. ಇದರಿಂದ ಬೇಸತ್ತ ಪತ್ನಿ 3 ವರ್ಷದ ಮಗ ದೀಕ್ಷಿತ್ ಗೌಡಗೆ ಲಕ್ಷ್ಮಣ ರೇಖೆ ಕೀಟನಾಶಕ ಕುಡಿಸಿ, ತಾನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದಂತ ತಾಯಿ-ಮಗನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ತೀವ್ರ ವಾಂತಿ, ಬೇಧಿಯಿಂದ 3 ವರ್ಷದ ದೀಕ್ಷಿತ್ ಗೌಡ ಸಾವನ್ನಪ್ಪಿದ್ದು, ಚಿಕಿತ್ಸೆಯ ಬಳಿಕ ತಾಯಿ ಪೂರ್ಣಿಮಾ ಚೇತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಘಟನೆಯ ಸಂಬಂಧ ಪೂರ್ಣಿಮಾ ವಿರುದ್ಧ ಪತಿ ಸೋಮಶೇಖರ್ ಹಾರೋಹಳ್ಳಿ ಠಾಣೆಗೆ ದೂರು ನೀಡಿದರೆ,
ಪತಿಯ ವಿರುದ್ಧ ಪೂರ್ಣಿಮಾ ಪೋಷಕರು ದೂರು ನೀಡಿದ್ದಾರೆ. ಈಗ ದೂರು, ಪ್ರತಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Advertisement. Scroll to continue reading.