ಕರಾವಳಿ

ವಿದ್ಯಾಭಾರತಿ ಕರ್ನಾಟಕ ಉಡುಪಿ : ಯೋಗ ಕಾರ್ಯಾಗಾರ

0

ಉಡುಪಿ : ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ, ಸಂವಿತ್ ಯೋಗ ರಿಸರ್ಚ್ ಫೌಂಡೇಶನ್ ಬೆಂಗಳೂರು ಜಂಟಿಯಾಗಿ ಸರಸ್ವತಿ ವಿದ್ಯಾಲಯ ಸಿದ್ದಾಪುರ ಸಹಯೋಗದಲ್ಲಿ ಸರಸ್ವತಿ ಮಾತೃಭಾರತಿ ಸಿದ್ಧಾಪುರ ಇದರ ಮಾತೆಯರಿಗಾಗಿ ಆಯೋಜಿಸಿದ ನಿತ್ಯ ಸರಳ ಯೋಗ ಶಿಬಿರವನ್ನು ಸರಸ್ವತಿ ಮಾತೃ ಭಾರತಿ ಸಿದ್ಧಾಪುರ ಅಧ್ಯಕ್ಷೆ ಮಲ್ಲಿಕಾ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷ ಪಾಂಡುರಂಗ ಪೈ ವಹಿಸಿದ್ದರು.

Advertisement. Scroll to continue reading.

ಈ ಸಂದರ್ಭ ಅವರು ಮಾತನಾಡಿ, ಯೋಗ ದೇಹ ಮತ್ತು ಮನಸ್ಸನ್ನು ಕೇಂದ್ರೀಕರಿಸುವ ಉತ್ತಮ ವಿಧಾನ ಹಾಗೂ ಮಾನಸಿಕ, ದೈಹಿಕವಾಗಿ ಸದೃಢವಾಗಿರಲು ಬಹಳ ಮುಖ್ಯ ಎಂಬುದನ್ನು ಅಧ್ಯಕ್ಷೀಯ ಮಾತಿನಲ್ಲಿ ಹೇಳಿ ಕಾರ್ಯಕ್ರಮದ ಯಶಸ್ವಿಗಾಗಿ ಶುಭ ಕೋರಿದರು.

ಕಾರ್ಯದರ್ಶಿ ಮಹೇಶ್ ಹೈಕಾಡಿ ಮಾತನಾಡಿ, ಯೋಗದಿಂದ ಆರೋಗ್ಯ ಮತ್ತು ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಹಾಗೂ ಯೋಗವನ್ನ ಜೀವನದುದ್ದಕ್ಕೂ ನಿತ್ಯ ಸರಳ ಹವ್ಯಾಸವೆಂಬಂತೆ ಅಳವಡಿಸಿಕೊಳ್ಳಬೇಕು ಎಂದರು.

ಸರಸ್ವತಿ ಮಾತೃಭಾರತಿ ಸಮಿತಿಯ ಕಾರ್ಯದರ್ಶಿ ಸೌಮ್ಯ , ಸಂಸ್ಥೆಯ ಪ್ರಾಂಶುಪಾಲೆ ಸೌಭಾಗ್ಯ ಹೆಗಡೆ ಉಪಸ್ಥಿತರಿದ್ದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಮಾತೃ ಭಾರತಿ ಪ್ರಮುಖ್ ಸಿಂಧು . ಹೆಚ್ . ಐತಾಳ್ ಮತ್ತು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಯೋಗ ಪ್ರಮುಖ್ ಸಂಜಯ್ ಸಿ . ವಿ. ನಿತ್ಯ ಸರಳ ಯೋಗ ಕಾರ್ಯಗಾರ ನಡೆಸಿಕೊಟ್ಟರು.


ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಪ್ರಶಿಕ್ಷಣ ಪ್ರಮುಖ್ ನವ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಸರಸ್ವತಿ ಮಾತೃಭಾರತಿ ಸಮಿತಿಯ ಸದಸ್ಯ ಪೂರ್ಣಿಮಾ ಸ್ವಾಗತಿಸಿದರು, ರಶ್ಮಿ ವಂದಿಸಿದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com