ಬಿಗ್ ಬಾಸ್ ಕನ್ನಡ ಸೀಸನ್ 10 ರ ಗ್ರ್ಯಾಂಡ್ ಫಿನಾಲೆ ಶುರುವಾಗಿದೆ. 113 ದಿನಗಳ ದೊಡ್ಮನೆ ಬಾಗಿಲು ಫಿನಾಲೆಯೊಂದಿಗೆ ಮುಚ್ಚಲಿದೆ. ವಿಜೇತರು ಯಾರಾಗಲಿದ್ದಾರೆ ಎಂಬ ಚರ್ಚೆಯೊಂದಿಗೆ ಕುತೂಹಲ ಹುಟ್ಟಿದೆ.
ವರ್ತೂರು ಸಂತೋಷ್, ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್, ವಿನಯ್, ತುಕಾಲಿ ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದಾರೆ.
ಈಗಾಗಲೇ ಬಿಗ್ ಬಾಸ್ ಕನ್ನಡ 10 ರ ಟಾಪ್ 6 ಕಂಟೆಸ್ಟಂಟ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ತುಕಾಲಿ ಸಂತೋಷ್ ಫಿನಾಲೆಯಲ್ಲಿ ಮೊದಲು ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಶುರುವಾಗ್ತಿದ್ದಂತೆ ಎಲಿಮಿನೇಟ್ ಆಗಿ ಹೊರಗೆ ಇರುವ ಬಿಗ್ ಬಾಸ್ ಮಾಜಿ ಸ್ಪರ್ಧಿಗಳೆಲ್ಲಾ ಮೊದಲು ಎಲಿಮಿನೇಟ್ ಆಗೋದು ತುಕಾಲಿ ಸಂತೋಷ್ ಎಂದ್ರು. ತುಕಾಲಿ ಸಂತೋಷ್ ಪತ್ನಿ ಕೂಡ ಗಂಡನ ಹೆಸರನ್ನೇ ಹೇಳಿದ್ರು.
ಉಳಿದಂತೆ ಯಾರು ಹೊರಗೆ ಬರ್ತಾರೆ? ಯಾರು ವಿನ್ನರ್ ಆಗ್ತಾರೆ ಎಂಬುದು ಭಾನುವಾರ ತಿಳಿಯಲಿದೆ.