ಚಿಂಚೋಳಿ : ಬಾವಿಗೆ ಹಾರಿದ ತಂಗಿಯನ್ನು ರಕ್ಷಿಸಲು ಹೋಗಿ ಅಣ್ಣನೂ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟ್ಟಪಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಯುವತಿಯನ್ನ ನಂದಿನಿ (18) ಹಾಗೂ ರಕ್ಷಿಸಲು ತೆರಳಿದ್ದ ಆಕೆಯ ಅಣ್ಣ ಸಂದೀಪ್ (21) ಮೃತ ದುರ್ದೈವಿಗಳಾಗಿದ್ದಾರೆ.
ಕಾಲೇಜಿಗೆ ಹೋಗು ಎಂದು ಅಣ್ಣ ತಂಗಿಗೆ ಬೈದಿದ್ದಾನೆ. ಇದರಿಂದ ತಂಗಿ ಮನನೊಂದು ಮನೆಯ ಬಳಿ ಇದ್ದ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವೇಳೆ ಅಣ್ಣ ಆಕೆಯನ್ನು ರಕ್ಷಿಸಲು ಹೋಗಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
Advertisement. Scroll to continue reading.
ಕಾಲೇಜಿಗೆ ಹೋಗುವಂತೆ ಅಣ್ಣ ಸಂದೀಪ್ ತಂಗಿಗೆ ಬೈದು ಬುದ್ಧಿ ಹೇಳಿದ್ದ ಇದರಿಂದ ಮನನೊಂದು ಓಡಿಹೋಗಿ ತಂಗಿ ನಂದಿನಿ ಬಾವಿಗೆ ಹಾರಿದ್ದಾಳೆ ಎಂದು ಹೇಳಲಾಗುತ್ತಿದೆ. ಇದೆ ವೇಳೆ ತಂಗಿಯನ್ನು ರಕ್ಷಿಸಲು ಹೋಗಿದ್ದ ಅಣ್ಣ ಸಂದೀಪ್ ಕೂಡ ಬಾವಿಗೆ ಹಾರಿದ್ದಾನೆ. ಮನೆ ಬಳಿ ಇದ್ದ ಬಾವಿಗೆ ಬಿದ್ದು ಅಣ್ಣ ತಂಗಿ ಇಬ್ಬರೂ ಕೂಡ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.