ಅಭಿಮಾನಿಗಳಿಗೆ ಆಘಾತ; ಮಾಡೆಲ್, ನಟಿ ಪೂನಂ ಪಾಂಡೆ ಇನ್ನಿಲ್ಲ
Published
1
ಮುಂಬೈ : ಹಾಟ್ ನಟಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ನಿಂದ ಮೃತಪಟ್ಟಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಅವರ ಮ್ಯಾನೇಜರ್ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಪೂನಮ್ ಪಾಂಡೆ ಅವರು ತಮ್ಮ ತವರು ಕಾನ್ಪುರದ ಮನೆಯಲ್ಲಿ ನಿಧನರಾಗಿದ್ದಾರೆ.
ಪೂನಮ್ ಪಾಂಡೆ ಅವರ ಮ್ಯಾನೇಜರ್ ಹಾಗೂ ಅವರ ಟೀಮ್ ಈ ಕುರಿತಾಗಿ ಇನ್ಸ್ಟಾಗ್ರಾಮ್ನಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ.
ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಬರೆದುಕೊಂಡಿರುವ ತಂಡ, ‘ಇಂದಿನ ಬೆಳಗ್ಗೆ ನಮಗೆಲ್ಲರಿಗೂ ಕಠಿಣ ದಿನವಾಗಿತ್ತು. ಗರ್ಭಕಂಠದ ಕ್ಯಾನ್ಸರ್ನ ಕಾರಣದಿಂದಾಗಿ ಇಂದು ನಾವು ಪೂನಮ್ ಅವರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಲು ದುಃಖವಾಗುತ್ತಿದೆ. ಆಕೆಯೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಗಳಿಗೂ ಶುದ್ಧ ಪ್ರತಿ ಹಾಗೂ ದಯೆಯಿಂದ ಭೇಟಿಯಾಗುತ್ತಿದ್ದರು. ಈ ದುಃಖದ ಸಮಯದಲ್ಲಿ ನಾವು ನಮ್ಮ ಖಾಸಗಿತನಕ್ಕಾಗಿ ವಿನಂತಿ ಮಾಡುತ್ತಿದ್ದೇವೆ. ಆಕೆಯೊಂದಿಗೆ ಹಂಚಿಕೊಂಡ ಎಲ್ಲಾ ಕ್ಷಣಗಳನ್ನು ನಾವು ನೆನಪಿಸಿಕೊಳ್ಳುತ್ತಿದ್ದೇವೆ’ ಎಂದು ಬರೆದುಕೊಂಡಿದೆ.
ಫೆಬ್ರವರಿ 1 ರಂದು ಅವರ ನಿಧನವಾಗಿದೆ ಎಂದು ಹೇಳಲಾಗಿದೆ.
ಅಂತ್ಯ ಸಂಸ್ಕಾರ ಕುರಿತಾದ ಇತರ ಮಾಹಿತಿಗಳು ಇನ್ನಷ್ಟೇ ಬರಬೇಕಿದೆ. ತಮ್ಮ ವಿವಾದಿತ ಮಾತುಗಳಿಂದಲೇ ಪ್ರಖ್ಯಾತಿ ಪಡೆದಿದ್ದ ಪೂನಮ್ ಪಾಂಡೆ, ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಫಾಲೋವರ್ಗಳನ್ನು ಹೊಂದಿದ್ದರು.
Advertisement. Scroll to continue reading.
2013ರಲ್ಲಿ ನಶಾ ಚಿತ್ರದ ಮೂಲಕ ಬಾಲಿವುಡ್ಗೆ ಲಗ್ಗೆ ಇಟ್ಟಿದ್ದರು.