ರಾಷ್ಟ್ರೀಯ

ಕಾಸರಗೋಡು : 70 ಲಕ್ಷ ರೂ. ಲಾಟರಿ ಗೆದ್ದಿದ್ದ ಯುವಕ ಆತ್ಮಹತ್ಯೆ!

0

ಕಾಸರಗೋಡು : ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ಲಾಟರಿಯ 70 ಲಕ್ಷ ರೂ. ಗೆದ್ದಿದ್ದ ಯುವಕ ಬೇಕರಿ ಅಂಗಡಿಯೊಳಗಡೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರದ ನೆಲ್ಲಿಕುಂಜೆಯಲ್ಲಿ ನಡೆದಿದೆ.

ಬಂಗ್ರಗುಡ್ಡೆಯ ವಿವೇಕ್ ಶೆಟ್ಟಿ (38) ಮೃತ ಯುವಕ.

ಬೆಳಿಗ್ಗೆ 10 ಗಂಟೆ ಸುಮಾರಿಗೆ ನೆಲ್ಲಿಕುಂಜೆ ರಸ್ತೆಯ ಬೇಕರಿ ಅಂಗಡಿಯೊಳಗಡೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಶಟರ್ ಮುಚ್ಚಿರುವುದರಿಂದ ಸಂಶಯಗೊಂಡು ಸಹೋದರ ತೊರೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

Advertisement. Scroll to continue reading.

ವಿವೇಕ್‌ಗೆ ನಾಲ್ಕು ತಿಂಗಳ ಹಿಂದೆ ಕೇರಳ ರಾಜ್ಯ ಲಾಟರಿಯ ಪ್ರಥಮ ಬಹುಮಾನ 70 ಲಕ್ಷ ರೂ. ಲಭಿಸಿತ್ತು.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಕಾಸರಗೋಡು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Advertisement. Scroll to continue reading.
    Click to comment

    You May Also Like

    Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com