ಕಳೆದ ಕೆಲವು ವಾರಗಳಿಂದ ಜೀ ಟಿ.ವಿಯಲ್ಲಿ ಪ್ರಸಾರವಾಗುತ್ತಿದ್ದ ಜೋಡಿ ನಂಬರ್ 1 ರಿಯಾಲಿಟಿ ಷೋನ ಗ್ರ್ಯಾಂಡ್ ಫಿನಾಲೆ ಭಾನುವಾರ ನಡೆದಿದೆ.
ಜೋಡಿ ನಂಬರ್ 1 ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಲಾವಣ್ಯಾ – ಶಶಿ ಹೆಗಡೆ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಪೂರ್ಣಿಯಾಗಿ ಮನ ಗೆದ್ದಿರುವ ಲಾವಣ್ಯಾ ಹಾಗೂ ಅಮೃತಧಾರೆಯ ಜೀವಾನಾಗಿ ಮಿಂಚುತ್ತಿರುವ ಶಶಿ ಜೋಡಿ ನಂಬರ್ 1 ನಲ್ಲೂ ಈ ಜೋಡಿ ಮೋಡಿ ಮಾಡಿತ್ತು.
ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಜೋಡಿ ನಂಬರ್ 1 ನಲ್ಲಿ ಆರಂಭದಿಂದಲೂ ಜನರಿಗೆ ಹತ್ತಿರವಾಗಿತ್ತು. ಟಾಸ್ಕ್, ಡ್ಯಾನ್ಸ್ ಎಲ್ಲದರಲ್ಲೂ ಮೋಡಿ ಮಾಡಿದ್ದರು.
ಇನ್ನು ಫಸ್ಟ್ ರನ್ನರ್ ಅಪ್ ಆಗಿ ರಮೇಶ್ ಪಂಡಿತ್ – ಸುನೇತ್ರಾ ದಂಪತಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಎರಡನೇ ರನ್ನರ್ ಅಪ್ ಆಗಿ ಗಣೇಶ್ – ವಿದ್ಯಾ ಜೋಡಿ ಹೊರ ಹೊಮ್ಮಿದ್ದಾರೆ.
ಈ ಸ್ಪರ್ಧೆಯಲ್ಲಿ ಲಾವಣ್ಯಾ, ಶಶಿ ಹೆಗಡೆ, ಸುನೇತ್ರಾ ಪಂಡಿತ್-ರಮೇಶ್ ಪಂಡಿತ್, ಚಿದಾನಂದ್-ಕವಿತಾ, ಸಿಲ್ಲಿ ಲಲ್ಲಿ ಆನಂದ್-ಚೈತ್ರಾ, ಮಾಲತಿ ಸರ್ದೇಶಪಾಂಡೆ-ಯಶವಂತ್ ಸರ್ದೇಶಪಾಂಡೆ, ಸಂಜುಬಸಯ್ಯ-ಪಲ್ಲವಿ, ಮಂಜುನಾಥ್-ಅನುಷಾ, ಗಣೇಶ್ ಕಾರಂತ್-ವಿದ್ಯಾ, ನೇತ್ರಾವತಿ-ಸದಾನಂದ ಜೋಡಿ ಭಾಗವಹಿಸಿದ್ದರು.