ಕರಾವಳಿ

ಬ್ರಹ್ಮಾವರ : ಆರತಕ್ಷತೆ ಸಮಾರಂಭದಲ್ಲಿ ಬ್ಯಾಗ್ ಕಳವು

Cartoon thief businessman running with money bag, flat style
0

ಬ್ರಹ್ಮಾವರ : ಮದುವೆ ಆರತಕ್ಷತೆಯಲ್ಲಿ ಲಕ್ಷಾಂತರ ರೂ. ನಗದು, ಸೊತ್ತುಗಳಿದ್ದ ಬ್ಯಾಗ್ ಕಳವಾಗಿರುವ ಘಟನೆ ಫೆಬ್ರವರಿ 4 ರಂದು ರಾತ್ರಿ ಬ್ರಹ್ಮಾವರದಲ್ಲಿ ನಡೆದಿದೆ.


ನೀಲಾವರದ ಜಯಶ್ರೀ ಸುರೇಶ್ ಎಂಬವರ ಮಗಳು ಸಮೀಕ್ಷಾಳ ಮದುವೆ ಆರತಕ್ಷತೆ ಸಮಾರಂಭವನ್ನು ಬ್ರಹ್ಮಾವರ ಶ್ಯಾಮಿಲಿ ಶನಾಯ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭ ಜಯಶ್ರೀ ತಮ್ಮ ಕೈಯಲ್ಲಿದ್ದ ಬ್ಯಾಗ್‌ನ್ನು ಹಾಲ್‌ನ ಸ್ಟೇಜ್‌ ಬದಿಯಲ್ಲಿದ್ದ ಕುರ್ಚಿಯ ಮೇಲಿಟ್ಟು ಮಗಳೊಂದಿಗೆ ಫೋಟೋ ತೆಗೆಸಿಕೊಳ್ಳಲು ಹೋಗಿದ್ದಾರೆ. ಬಳಿಕ ಬಂದು ನೋಡಿದಾಗ ಬ್ಯಾಗ್ ಕಳವಾಗಿರುವುದು ಕಂಡು ಬಂದಿದೆ.

ಬ್ಯಾಗ್‌ನಲ್ಲಿ 2,40,000 ರೂ. ಮೌಲ್ಯದ ನಗದು ಹಾಗೂ ವಸ್ತುಗಳಿದ್ದವು ಎನ್ನಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com