ರಾಷ್ಟ್ರೀಯ

‘ಗಡಿಯಾರ’ ಕಳೆದುಕೊಂಡ ಶರದ್ ಪವಾರ್; ಅಜಿತ್ ಪವಾರ್ ಬಣ ನಿಜವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ ಎಂದ ಚುನಾವಣಾ ಆಯೋಗ

0

ನವದೆಹಲಿ : ಭಾರತದ ಚುನಾವಣಾ ಆಯೋಗದಿಂದ ಶರದ್ ಪವಾರ್ ಬಣಕ್ಕೆ ದೊಡ್ಡ ಆಘಾತ ಉಂಟಾಗಿದೆ. ಅಜಿತ್ ಪವಾರ್ ನೇತೃತ್ವದ ಬಣವನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವೆಂದು ಗುರುತಿಸಿರುವ ಆಯೋಗ ಅವರಿಗೆ ಎನ್‌ಸಿ‌ಪಿಯ “ಗಡಿಯಾರ” ಚಿಹ್ನೆಯನ್ನು ನೀಡಿದೆ.

 6 ತಿಂಗಳಿಗಿಂತ ಹೆಚ್ಚು ಕಾಲ 10 ಕ್ಕೂ ಹೆಚ್ಚು ವಿಚಾರಣೆಗಳ ನಂತರ ಅಜಿತ್ ಪವಾರ್ ನೇತೃತ್ವದ ಬಣದ ಪರವಾಗಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ವಿಚಾರದ ವಿವಾದವನ್ನು ಚುನಾವಣಾ ಆಯೋಗ ಇತ್ಯರ್ಥ ಮಾಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರಮುಖ ಕಾನೂನು ತಂಡಗಳ 10 ಕ್ಕೂ ಹೆಚ್ಚು ವಿಚಾರಣೆಗಳ ನಂತರ ಅಜಿತ್ ಪವಾರ್ ಅವರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಹೆಸರು ಮತ್ತು ಚಿಹ್ನೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದೆ. ಇದರೊಂದಿಗೆ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯೇ ನಿಜವಾದ ಪಕ್ಷ ಎಂದು ಚುನಾವಣಾ ಆಯೋಗ ಪರಿಗಣಿಸಿದಂತಾಗಿದೆ. 

Advertisement. Scroll to continue reading.

ಎಲ್ಲ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಎನ್‌ಸಿಪಿಯ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಬಳಸಲು ಅಜಿತ್ ಪವಾರ್ ಬಣಕ್ಕೆ ಹಕ್ಕಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಆದರೆ, ಹೊಸ ಪಕ್ಷ ರಚನೆಗೆ ಮೂರು ಹೆಸರುಗಳನ್ನು ನೀಡುವಂತೆ ಆಯೋಗ ಶರದ್ ಪವಾರ್ ಅವರನ್ನು ಕೇಳಿದೆ. ಈ ಹೆಸರುಗಳನ್ನು ಬುಧವಾರ ಸಂಜೆ 4 ಗಂಟೆಯೊಳಗೆ ನೀಡಬೇಕು ಎಂದು ತಿಳಿಸಿದೆ.

ಚುನಾವಣಾ ಆಯೋಗದ ಪ್ರಕಾರ, ಶರದ್ ಪವಾರ್ ಬಣವು ಸರಿಯಾದ ಸಮಯಕ್ಕೆ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ನಿರ್ಧಾರ ಅವರ ಪರವಾಗಿ ಬಂದಿಲ್ಲ. ಮಹಾರಾಷ್ಟ್ರದಿಂದ 6 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಗೆ ಗಡುವನ್ನು ಗಮನದಲ್ಲಿಟ್ಟುಕೊಂಡು, ಶರದ್ ಪವಾರ್ ಬಣಕ್ಕೆ ಚುನಾವಣಾ ನೀತಿ ನಿಯಮಗಳು 1961 ರ ನಿಯಮ 39AA ಅನ್ನು ಅನುಸರಿಸಲು ವಿಶೇಷ ರಿಯಾಯಿತಿ ನೀಡಲಾಗಿದೆ. ಹೊಸ ಪಕ್ಷದ ರಚನೆಗೆ ಮೂರು ಹೆಸರುಗಳನ್ನು ನೀಡುವಂತೆ ಅವರನ್ನು ಕೇಳಲಾಗಿದೆ. ಫೆಬ್ರವರಿ 7 ರ ಸಂಜೆಯ ಒಳಗಾಗಿ ಈ ಹೆಸರನ್ನು ತಿಳಿಸುವಂತೆ ಹೇಳಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com