ಬೆನೋನಿ: ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 2 ವಿಕೆಟ್ ಗಳಿಂದ ಅಮೋಘ ಗೆಲುವು ಸಾಧಿಸಿದೆ. ಈ ಮೂಲಕ ಫೈನಲ್ ಪ್ರವೇಶಿಸಿದೆ.
ಐಸಿಸಿ ಅಂಡರ್-19 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಲಷ್ಟೇ ಶಕ್ಯವಾಯಿತು. ಗುರಿ ಬೆನ್ನಟ್ಟಿದ ಭಾರತ 7 ಎಸೆತಗಳು ಇರುವಂತೆ ಭಾರತ 248 ರನ್ ಬಾರಿಸುವ ಮೂಲಕ ಗೆಲುವು ದಕ್ಕಿಸಿಕೊಂಡಿತು.
ಭಾರತ ಪರ ಸಚಿನ್ ದಾಸ್ 96 ಮತ್ತು ಉದಯ್ ಸಹರನ್ 81 ರನ್ ಗಳ ನೆರವಿನೊಂದಿಗೆ ಭಾರತ ಗೆಲುವಿನ ದಡ ಸೇರಿತು.
Advertisement. Scroll to continue reading.
ಇನ್ನುಳಿದಂತೆ ಅರ್ಶಿನ್ ಕುಲಕರ್ಣಿ 12, ಮುಶೀರ್ ಖಾನ್ 4, ಮೊಲಿಯಾ 5, ಮತ್ತು ಅವನಿಶ್ 10 ರನ್ ಗಳಿಸಿದರು.
ದಕ್ಷಿಣ ಆಫ್ರಿಕಾ ಪರ ಲುವಾನ್-ಡ್ರೆ ಪ್ರಿಟೋರಿಯಸ್ ಅತ್ಯಧಿಕ ಸ್ಕೋರ್ 76 ರನ್ ಗಳಿಸಿದರೆ, ರಿಚರ್ಡ್ ಸೆಲೆಟ್ಸ್ವಾನೆ 64 ರನ್ ಗಳಿಸಿದರು. ಭಾರತದ ಪರ ರಾಜ್ ಲಿಂಬಾನಿ 3 ವಿಕೆಟ್ ಪಡೆದರು. ಮುಶೀರ್ ಖಾನ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಐದು ಬಾರಿ ಅಂಡರ್-19 ಪ್ರಶಸ್ತಿ ಗೆದ್ದಿರುವ ಭಾರತ ತಂಡ ಇಂದಿನ ಪಂದ್ಯ ಗೆದ್ದು ಫೈನಲ್ ತಲುಪಿ ಮತ್ತೆ ಗೆಲುವಿನ ನಾಗಾಲೋಟ ಮುಂದುವರೆಸೋ ತವಕದಲ್ಲಿದೆ.
Advertisement. Scroll to continue reading.