ದಾವಣಗೆರೆ : ಸಂಸದ ಡಿಕೆ ಸುರೇಶ್ ಹಾಗೂ ಶಾಸಕ ವಿನಯ ಕುಲಕರ್ಣಿ ಮಾದರಿ ದೇಶದ್ರೋಹಿ ಹೇಳಿಕೆ ನೀಡಿದವರಿಗೆ ಗುಂಡಿಕ್ಕುವ ಕಾನೂನು ತರಬೇಕು ಎಂದು
ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.
ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಹೀಗೆ ಬಿಡಲ್ಲ. ನಾವು ಬಿಜೆಪಿಯವರು ಪಾಕಿಸ್ತಾನವನ್ನ ಭಾರತದಲ್ಲಿ ಸೇರ್ಪಡೆ ಮಾಡಿ ಅಖಂಡ ಭಾರತ ಮಾಡುತ್ತೇವೆ. ಒಂದು ಕಡೆ ಮೋದಿ ಹಾಗೂ ಹಾಗೂ ಇನ್ನೊಂದು ಕಡೆ ಶ್ರೀರಾಮ ಚಂದ್ರ ಇದು ಬಿಜೆಪಿ ಸಿದ್ದಾಂತ ಎಂದು ಹೇಳಿದ್ದಾರೆ.
ಸುಳ್ಳುರಾಮಯ್ಯ ಒಂದು ಸತ್ಯ ಹೇಳಿದ್ದಾರೆ. ದೇಶ ವಿಭಜನೆಗೆ ಒಪ್ಪೊಲ್ಲ ಅಂತಾ. ಜಾತಿಗಳ ನಡುವೆ ವಿಷಬೀಜ ಬಿತ್ತಿ ತುಂಡು ಮಾಡಿದ್ದವನನ್ನು ರಾಮ ಒಟ್ಟುಗೂಡಿಸಿದ. ಪ್ರಧಾನಿ ಮೋದಿಯವರ ಹೆಸರು ಹೇಳಿದ್ರೆ ರಾಷ್ಟ್ರ ಭಕ್ತಿ ಉಕ್ಕಿ ಕಾಂಗ್ರೆಸ್ ನವರೇ ವೋಟು ಕೊಡುತ್ತಿದ್ದಾರೆ. ಭಾರತೀಯ ಪಾರ್ಟಿಯಲ್ಲಿ ಕಾರ್ಯಕರ್ತರು ಸದೃಡವಾಗಿದ್ದಾರೆ. ನಾವೆಲ್ಲರು ದೇಶ ಮುಖ್ಯ ಎನ್ನುವವರು ಎಂದರು.
Advertisement. Scroll to continue reading.
ರಾಮಮಂದಿರ ದೇಶವನ್ನು ಒಂದುಗೂಡಿಸಿತು :
900 ವರ್ಷ ಈ ದೇಶ ಮುಸಲ್ಮಾನರು ಆಳಿದರು. ಕಾಶಿ ಮಥುರಾ, ಅಯೋಧ್ಯೆ ಹೀಗೆ ಎಲ್ಲ ಕಡೆಯೂ ಅವರ ಆಳ್ವಿಕೆಯಲ್ಲಿ ಮಸೀದಿ ಕೂತಿದ್ದವು. ಭಾರತೀಯರು ಗುಲಾಮರು ಎಂದು ಬಾಬರಿ ಮಸೀದಿ ಹೇಳುತ್ತಿತ್ತು. ಆಯೋಧ್ಯಾ ರಾಮಮಂದಿರ ಇದೀಗ ದೇಶವನ್ನು ಒಂದುಗೂಡಿಸಿತು. ಅಷ್ಟೇ ಅಲ್ಲ ನಮಗೆ ಕಾಶಿಯೂ ಪವಿತ್ರ ಸ್ಥಳ ಇದೀಗ ಅಲ್ಲಿಯೂ ಕಾಶಿ ವಿಶ್ವನಾಥನ ದೇವಾಲಯದಲ್ಲಿ ಯೋಗಿ ಪೂಜೆ ಆರಂಭಿಸಿದ್ದಾರೆ. ಅನೇಕ ಮುಸಲ್ಮಾನರು ಅಯೋಧ್ಯೆಗೆ ಹೋಗಿ ಪೂಜೆ ಮಾಡುತ್ತಿದ್ದಾರೆ. ಇಷ್ಟು ವರ್ಷ ಜೈಶ್ರೀರಾಮ್ ಘೋಷಣೆ ಆಯಿತು. ಇದೀಗ ಹರ ಹರ ಮಹಾದೇವ್ ಘೋಷಣೆ ಮೊಳಗುತ್ತಿದೆ. ಕಾನೂನಿನ ಮೂಲಕ ಜ್ಞಾನವಾಪಿ ಮಸೀದಿಯನ್ನೂ ತೆರವುಗೊಳಿಸಲಿದ್ದೇವೆ ಎಂದಿದ್ದಾರೆ.
ಇಬ್ಬರನ್ನು ಪಕ್ಷದಿಂದ ಕಿತ್ತು ಹಾಕಿ :
ಸಿದ್ದರಾಮಯ್ಯ ಸರ್ಕಾರ ಯಾವಾಗ ಬಿದ್ದೋಗುತ್ತೋ ಗೊತ್ತಿಲ್ಲ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಸ್ವಾಗತ. ಆದರೆ ಭಾರತವನ್ನು ತುಂಡು ಮಾಡುವ ಡಿಕೆ ಸುರೇಶ್, ವಿನಯ್ ಕುಲಕರ್ಣಿಯವರನ್ನು ಕಿತ್ತುಹಾಕಿದರೆ ಭಾರತ್ ಜೋಡೋ ಯಾತ್ರೆಗೆ ಅರ್ಥ ಬರುತ್ತದೆ. ಮೊದಲು ಆ ದೇಶದ್ರೋಹಿಗಳನ್ನು ಪಕ್ಷದಿಂದ ಕಿತ್ತುಹಾಕಿ ಎಂದು ರಾಹುಲ್ ಗಾಂಧಿಗೆ ಆಗ್ರಹಿಸಿದರು.
Advertisement. Scroll to continue reading.