ರಾಜ್ಯ

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಸೋಮಣ್ಣಗೆ ಬಿಗ್ ಶಾಕ್!

1

ನವದೆಹಲಿ : ರಾಜ್ಯಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣ ಭಾಂಡಗೆ ಅವಕಾಶ ನೀಡಲಾಗಿದೆ. ಈ ಮೂಲಕ ಮಾಜಿ ಸಚಿವ ವಿ.ಸೋಮಣ್ಣನವರಿಗೆ ಬಿಗ್‌ ಶಾಕ್‌ ಆಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ವಿ.ಸೋಮಣ್ಣ ಈ ಹಿಂದೆ ವರಿಷ್ಠರನ್ನು ಭೇಟಿಯಾದಾಗ ಸೋಮಣ್ಣ ತಮ್ಮನ್ನು ರಾಜ್ಯಸಭೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆದರೆ, ಫಲ ಸಿಕ್ಕಿಲ್ಲ. ಬಾಗಲಕೋಟೆ ಮೂಲದ ನಾರಾಯಣ ಭಾಂಡಗೆ ಅವಕಾಶ ಸಿಕ್ಕಿದೆ.

ರಾಜೀವ್ ಚಂದ್ರಶೇಖರ್, ಜಿಸಿ ಚಂದ್ರಶೇಖರ್, ಎಲ್ ಹನುಮಂತಯ್ಯ, ನಸೀರ್ ಅಹಮದ್ ರವರ ಅವಧಿ ಮುಕ್ತಾಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ.

ಕರ್ನಾಟಕ ಮಾತ್ರವಲ್ಲದೇ ಆಂಧ್ರ ಪ್ರದೇಶದ 3 ಸ್ಥಾನ, ಬಿಹಾರ್ 6 ಸ್ಥಾನ, ಗುಜರಾತ್ 4 ಸ್ಥಾನ, ಹರಿಯಾಣ, ಚತ್ತೀಸ್ಗಢ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲಿ ಒಂದು ಸ್ಥಾನ, ಉತ್ತರ ಪ್ರದೇಶ 10 ಸ್ಥಾನ, ತೆಲಂಗಾಣ, ಒಡಿಸ್ಸಾ, ರಾಜಸ್ಥಾನದಲ್ಲಿ ಮೂರು ಸ್ಥಾನ, ಪಶ್ಚಿಮ ಬಂಗಾಳದಲ್ಲಿ 5 ಸ್ಥಾನ, ಮಹಾರಾಷ್ಟ್ರದಲ್ಲಿ 6 ಸ್ಥಾನ, ಮಧ್ಯ ಪ್ರದೇಶದಲ್ಲಿ 5 ರಾಜ್ಯ ಸಭಾ ಸ್ಥಾನಗಳಿಗೆ ಚುನಾವಣೆಯನ್ನು ಘೋಷಣೆ ಮಾಡಲಾಗಿದೆ.

Advertisement. Scroll to continue reading.

ಯಾರಿಗೆಲ್ಲ ಟಿಕೆಟ್ ?

  • ಧರ್ಮಶೀಲಾ ಗುಪ್ತಾ: ಬಿಹಾರ
  • ಡಾ.ಭೀಮ್ ಸಿಂಗ್: ಬಿಹಾರ
  • ರಾಜಾ ದೇವೇಂದ್ರ ಪ್ರತಾಪ್ ಸಿಂಗ್: ಛತ್ತೀಸಗಢ್
  • ಸುಭಾಷ್ ಬರಲಾ: ಹರಿಯಾಣ
  • ನಾರಾಯಾಣ ಭಾಂಡಗೆ: ಕರ್ನಾಟಕ
  • ಆರ್ಪಿಎನ್ ಸಿಂಗ್: ಉತ್ತರ ಪ್ರದೇಶ
  • ಸುಭಾಂಶು ತ್ರಿವೇದಿ: ಉತ್ತರ ಪ್ರದೇಶ
  • ಚೌಧರಿ ತೇಜ್ವೀರ್ ಸಿಂಗ್: ಉತ್ತರ ಪ್ರದೇಶ
  • ಸಾಧನಾ ಸಿಂಗ್: ಉತ್ತರ ಪ್ರದೇಶ
  • ಅಮರಪಾಲ್ ಮೌರ್ಯ: ಉತ್ತರ ಪ್ರದೇಶ
  • ಸಂಗೀತಾ ಬಲ್ವಂತ್: ಉತ್ತರ ಪ್ರದೇಶ
  • ನವೀನ್ ಜೈನ್: ಉತ್ತರ ಪ್ರದೇಶ
  • ಮಹೇಂದ್ರ ಭಟ್: ಉತ್ತರಾಖಂಡ್
  • ಸಮಿಕಾ ಭಟ್ಟಾಚಾರ್ಯ: ಪಶ್ಚಿಮ ಬಂಗಾಳ

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com