ಮಣಿಪಾಲ : ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಡಿಕ್ಕಿ ಹೊಡೆದ ಘಟನೆ ಶಿವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಮಂಜುನಾಥ (೩೬) ಮೃತ ಸವಾರ.
ಮಂಜುನಾಥ ಸಂಜೆ ಶಿವಳ್ಳಿ ಗ್ರಾಮದ ಶ್ರೀ ಆದಿ ಶಕ್ತಿ ದೇವಸ್ಥಾನ ಕ್ರಾಸ್ ದಾಟಿ ಮಣಿಪಾಲ ಕಡೆಗೆ ಹೋಗುತ್ತಿರುವಾಗ ಘಟನೆ ನಡೆದಿದೆ.
ಮಂಜುನಾಥ ಅವರ ಸ್ಕೂಟರ್ನ್ನು ಓವರ್ ಟೇಕ್ ಮಾಡಿ ಟ್ಯಾಂಕರ್ನ್ನು ಒಮ್ಮೆಲೆ ತೀರಾ ಎಡ ಬದಿಗೆ ತಿರುಗಿಸಿದ ಪರಿಣಾಮ ಟ್ಯಾಂಕರ್ನ ಹಿಂದಿನ ಭಾಗ ಮಂಜುನಾಥ ಅವರ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
Advertisement. Scroll to continue reading.
ಮಂಜುನಾಥ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದರು.
ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿ ಪರೀಕ್ಷಿಸಿದ ವೈದ್ಯರು ಮಂಜುನಾಥ ಇವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಟ್ಯಾಂಕರ್ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.