ಉಚ್ಚಿಲ : ಸಾಮಾಜಿಕ, ಧಾರ್ಮಿಕ ಧುರೀಣ, ಕಾಂಗ್ರೆಸ್ ನಾಯಕ ಪಣಿಯೂರು ಎ.ಕೆ.ಸುಲೈಮಾನ್ (72) ಅಲ್ಪಕಾಲದ ಅನಾರೋಗ್ಯದಿಂದಾಗಿ ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಉಡುಪಿಯ ಉಚ್ಚಿಲ ಸಮೀಪದ ಪಣಿಯೂರು ನಿವಾಸಿಯಾಗಿದ್ದ ಎ.ಕೆ.ಸುಲೈಮಾನ್, ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಉಡುಪಿ ತಾಲೂಕು ಪಂಚಾಯತ್ ನ ಮಾಜಿ ಸದಸ್ಯರಾಗಿದ್ದ ಅವರು, ಎರ್ಮಾಳ್ ಜುಮಾ ಮಸ್ಜಿದ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ ರಿಯಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಅಗಲಿದ್ದಾರೆ.
ಮೃತದೇಹವನ್ನು ಸಂಜೆಯ ವೇಳೆಗೆ ಪಣಿಯೂರಿನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ಅಂತ್ಯಸಂಸ್ಕಾರವು ಎರ್ಮಾಳ್ ಜುಮಾ ಮಸೀದಿಯ ವಠಾರದಲ್ಲಿ ಸಂಜೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವರದಿ : ಶಫೀ ಉಚ್ಚಿಲ
Advertisement. Scroll to continue reading.