ರಾಷ್ಟ್ರೀಯ

ಆಹಾರಕ್ಕಿಂತ ಹೆಚ್ಚು ಅಮಲು ಪದಾರ್ಥಕ್ಕೆ ಖರ್ಚು ಮಾಡುತ್ತಾರೆ ಭಾರತೀಯರು: ಸಮೀಕ್ಷೆ

1

ನವದೆಹಲಿ: ಭಾರತೀಯ ಕುಟುಂಬಗಳ ಮಾಸಿಕ ಖರ್ಚು ಹಾಗೂ ಬಳಕೆಯ ಮಾದರಿ ಬದಲಾಗುತ್ತಿದೆ ಎಂದು ರಾಷ್ಟ್ರೀಯ ಅಂಕಿ ಅಂಶಗಳ ಸಂಸ್ಥೆಯ ಇತ್ತೀಚಿನ ವರದಿ ಬಹಿರಂಗ ಪಡಿಸಿದೆ.

ಆಹಾರ ಪದಾರ್ಥಗಳು ಮತ್ತು ಶಿಕ್ಷಣದ ಮೇಲಿನ ಖರ್ಚು ಕಡಿಮೆಯಾಗಿದ್ದರೂ, ವೈದ್ಯಕೀಯ ವೆಚ್ಚಗಳು, ಸಾಗಣೆ, ಬಾಡಿಗೆ ಮತ್ತು ಅನಾರೋಗ್ಯಕರ ವಸ್ತುಗಳಾದ ಪಾನ್, ತಂಬಾಕು, ಅಮಲು ಪದಾರ್ಥಗಳ ವೆಚ್ಚವು ಏರಿಕೆಯಾಗಿದೆ. ಗ್ರಾಮೀಣ ಮತ್ತು ನಗರಗಳ ಎರಡೂ ಕುಟುಂಬಗಳ ಖರ್ಚು ಮತ್ತು ಬಳಕೆಯ ಮಾದರಿ ಬಹುತೇಕ ಸಮಾನವಾಗಿದೆ.

ಗ್ರಾಮೀಣ ಕುಟುಂಬಗಳಿಗೆ ಹೋಲಿಸಿದರೆ ನಗರ ಪ್ರದೇಶದ ಕುಟುಂಬಗಳಲ್ಲಿ ಮೊಟ್ಟೆ, ಮೀನು ಮತ್ತು ಮಾಂಸದ ಮೇಲೆ ಮಾಡುವ ಖರ್ಚು ಕಡಿಮೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಲ್ಪ ಹೆಚ್ಚಾಗಿದೆ. ಆಗಸ್ಟ್ 2022 ರಿಂದ ಜುಲೈ 2023 ರ ಅವಧಿಯಲ್ಲಿ ನಡೆಸಲಾದ ಗೃಹ ಬಳಕೆ ವೆಚ್ಚ ಸಮೀಕ್ಷೆಯ ವಿವರವಾದ ವರದಿಯನ್ನು ಸರ್ಕಾರವು ಇನ್ನೂ ಬಿಡುಗಡೆ ಮಾಡಿಲ್ಲ. ಸುಮಾರು ಒಂದು ದಶಕದ ನಂತರ ಅಂತಹ ಸಮೀಕ್ಷೆ ಮಾಡಲಾಗಿದ್ದು ವರದಿ ಶೀಘ್ರವೇ ಬಿಡುಗಡೆಯಾಗಲಿದೆ.

Advertisement. Scroll to continue reading.

ಕಳೆದ ಒಂದು ದಶಕದಲ್ಲಿ ಭಾರತದ ಗ್ರಾಮೀಣ ಮತ್ತು ನಗರಗಳೆರಡೂ ಆಹಾರ ಸೇವನೆಯ ಮೇಲಿನ ವೆಚ್ಚವನ್ನು ಕಡಿಮೆ ಮಾಡಿದೆ ಹಾಗೂ ಆಹಾರೇತರ ವಸ್ತುಗಳ ಮೇಲಿನ ವೆಚ್ಚವನ್ನು ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ. 2011ರಲ್ಲಿ, ನಗರ ಭಾರತವು ತನ್ನ ಮಾಸಿಕ ವೆಚ್ಚದ ಶೇ.42.6 ರಷ್ಟನ್ನು ಆಹಾರಕ್ಕಾಗಿ ಖರ್ಚು ಮಾಡುತ್ತಿತ್ತು, ಈಗ ಅದು ಶೇ.39 ಕ್ಕೆ ಇಳಿದಿದೆ. ಗ್ರಾಮೀಣ ಭಾರತದಲ್ಲಿ, ಆಹಾರದ ಮೇಲಿನ ವೆಚ್ಚವು ಶೇ. 52.8 ರಿಂದ ಶೇ. 46.38ಕ್ಕೆ ಇಳಿಸಲಾಗಿದೆ.

ಬೇಳೆಕಾಳುಗಳು, ತರಕಾರಿಗಳು, ಖಾದ್ಯ ತೈಲಗಳು, ಉಪ್ಪು ಮತ್ತು ಸಕ್ಕರೆಯೊಂದಿಗೆ ಧಾನ್ಯಗಳ ಬಳಕೆ ತೀವ್ರವಾಗಿ ಕಡಿಮೆಯಾಗಿದೆ. ಶಿಕ್ಷಣ, ಇಂಧನ ಮತ್ತು ಬೆಳಕು, ಬಟ್ಟೆ ಮತ್ತು ಪಾದರಕ್ಷೆಗಳ ಮೇಲಿನ ವೆಚ್ಚದಲ್ಲಿ ಇದೇ ರೀತಿಯ ಕುಸಿತವಿದೆ. ಸರ್ಕಾರದ ಕಲ್ಯಾಣ ಯೋಜನೆಗಳಿಂದ ಸಿರಿಧಾನ್ಯಗಳ ಮೇಲಿನ ಖರ್ಚು ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ವರದಿ ಪ್ರಕಾರ ಪಾನ್, ತಂಬಾಕು ಮತ್ತು ಇತರ ಅಮಲು ಪದಾರ್ಥಗಳಂತಹ ಅನಾರೋಗ್ಯಕರ ವಸ್ತುಗಳ ಸೇವನೆ ಹೆಚ್ಚುತ್ತಿರುವುದನ್ನು ವರದಿ ತಿಳಿಸಿದೆ. ವೈದ್ಯಕೀಯ ವೆಚ್ಚಗಳು, ಬಾಡಿಗೆ ಮತ್ತು ಸಾಗಣೆಯ ವೆಚ್ಚವೂ ಹೆಚ್ಚಾಗಿದೆ. ಹಾಲು ಮತ್ತು ಹಾಲು-ಸಂಬಂಧಿತ ಉತ್ಪನ್ನಗಳ ಮೇಲಿನ ಖರ್ಚು ಕನಿಷ್ಠ ಏರಿಕೆ ಕಂಡಿದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com