ಕರಾವಳಿ

ಉಡುಪಿ : ಅಂಗವಿಕಲತೆ ಹೊಂದಿರುವ ಕುಷ್ಠರೋಗಿಗಳಿಗೆ ರೀ-ಕನ್ಸ್ಟ್ರಕ್ಟೀವ್ ಸರ್ಜರಿ

0

ಉಡುಪಿ : ಕುಷ್ಠರೋಗವು ಅತೀ ಪುರಾತನವಾದ ಮತ್ತು ನಿಧಾನಗತಿಯಲ್ಲಿ ಮನುಷ್ಯನ ಚರ್ಮ ಮತ್ತು ನರಗಳನ್ನು ಬಾಧಿಸುವ ಮೈಕೊ ಬ್ಯಾಕ್ಟೀರಿಯಾ ಲೆಪ್ರೆ ಎಂಬ ಸೂಕ್ಷ್ಮಾಣು ಜೀವಿಯಿಂದ ಗಾಳಿಯ ಮೂಲಕ ಹರಡುವ ರೋಗವಾಗಿದ್ದು, ಇದನ್ನು ಬಹು ಔಷಧೀಯ ವಿಧಾನ ಎಂಬ ಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾದ ಖಾಯಿಲೆಯಾಗಿದೆ. ಆದರೆ ಈ ಬ್ಯಾಕ್ಟಿರೀಯಾ ನರಗಳಿಗೆ ಭಾದಿಸಿದಾಗ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ ಕೈಕಾಲುಗಳಲ್ಲಿ ಅಂಗವಿಕಲತೆಯು ಕಾಣಿಸಿಕೊಳ್ಳುತ್ತದೆ. ಈ ಅಂಗವಿಕಲತೆಯನ್ನು ರೀ-ಕನ್ಸ್ಟ್ರಕ್ಟೀವ್ ಸರ್ಜರಿ ಮೂಲಕ ಸರಿಪಡಿಸಕೊಳ್ಳಬಹುದಾಗಿದೆ.

ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಮಹೇಂದ್ರ ಕುಮಾರ್ ಶೆಟ್ಟಿ ಅವರು, ರೀ-ಕನ್ಸ್ಟ್ರಕ್ಟೀವ್ ಸರ್ಜರಿ ಶಸ್ತ್ರ ಚಿಕಿತ್ಸೆಯನ್ನು ಮಾಡುವಲ್ಲಿ ಪರಿಣಿತರಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 16 ಅಂಗವಿಕಲತೆ ಇರುವ ಕುಷ್ಠರೋಗಿಗಳನ್ನು ಗುರುತಿಸಿದ್ದು, ಜಿಲ್ಲಾ ಕುಷ್ಠರೋಗ ನಿವಾರಣಾ ಕಚೇರಿ ವತಿಯಿಂದ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗಾಗಲೇ ಒಬ್ಬ ರೋಗಿಯ ರೀ-ಕನ್ಸ್ಟ್ರಕ್ಟೀವ್ ಸರ್ಜರಿ ಅನ್ನು ಉಚಿತವಾಗಿ ಮಾಡಲಾಗಿದ್ದು, ಉಳಿದ ಎಲ್ಲಾ ಅಂಗವಿಕಲತೆ ಇರುವ ಕುಷ್ಠರೋಗಿಗಳ ರೀ-ಕನ್ಸ್ಟ್ರಕ್ಟೀವ್ ಸರ್ಜರಿ ಅನ್ನು ಜಿಲ್ಲೆಯಲ್ಲಿಯೇ ಮಾಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.  

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com