ಬೆಳಗಾವಿ: ಸುಮಾರು ಏಳು ತಿಂಗಳ ಹಿಂದೆ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ವೀಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಸಂತ್ರಸ್ತೆಯ ಪುತ್ರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿರುವುದಾಗಿ ಗುರುವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, 2023ರ ಜುಲೈ 31 ರಂದು ಸರ್ಕಾರವು ತನಗೆ ಮಂಜೂರು ಮಾಡಿದ ಮೂರು ಎಕರೆ ಭೂಮಿಯಲ್ಲಿ ಅರ್ಧ ಎಕರೆ ಭೂಮಿ ಒತ್ತುವರಿಯನ್ನು ಪ್ರಶ್ನಿಸಿದ್ದಕ್ಕಾಗಿ ಸಂತ್ರಸ್ತೆ ಮತ್ತು ಅವಳ ಮಗನನ್ನು ಥಳಿಸಿದ ಘಟನೆ ನಡೆದಿದೆ.
ಆರೋಪಿಯು ಮಹಿಳೆಯ ನಗ್ನ ಮೆರವಣಿಗೆ ನಡೆಸಿ, ಆಕೆಯ ಮನೆಯವರನ್ನು ಥಳಿಸಿದ್ದಲ್ಲದೆ, ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾಗಿ ದೂರುದಾರರು ಆರೋಪಿಸಿದ್ದಾರೆ.
Advertisement. Scroll to continue reading.
ಗುರುವಾರ ಸಂತ್ರಸ್ತೆ ಮಗಳು ದೂರು ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ವಂಟಮುರಿ ಗ್ರಾಮದಲ್ಲಿ 2023ರ ಡಿಸೆಂಬರ್ 11 ರಂದು ತನ್ನ ಮಗ ಇತರ ಸಮುದಾಯದ ಹುಡುಗಿ ಜೊತೆ ಓಡಿಹೋದ ನಂತರ ಮಹಿಳೆ ಮೇಲೆ ಇದೇ ರೀತಿಯ ಅಮಾನವೀಯ ಘಟನೆ ನಡೆದಿತ್ತು.
Advertisement. Scroll to continue reading.