ಮುಂಬೈ: ಸೀರಿಯಲ್ ಕಿಸ್ಸರ್ ಖ್ಯಾತಿಯ ನಟ ಇಮ್ರಾನ್ ಹಷ್ಮಿ ಮತ್ತೆ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಅವರು ವೆಬ್ ಸೀರೀಸ್‌ನಲ್ಲಿ ನಟಿಸುತ್ತಿದ್ದಾರೆ. ಅವರು ನಟಿ ಮೌನಿರಾಯ್ ಜತೆ ‘ಶೋಟೈಮ್’ ಎಂಬ ಸೀರಿಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಶೋಟೈಮ್’ ವೆಬ್ ಸರಣಿಯ ಮೂಲಕ ಅಭಿಮಾನಿಗಳು ಮತ್ತೆ ಇಮ್ರಾನ್ ಹಷ್ಮಿ ಅವರ ಸೀರಿಯಲ್ ಕಿಸ್ಸರ್ ಅವತಾರ ನೋಡಲಿದ್ದಾರೆ. ಇದರ ಒಂದು ದೃಶ್ಯ ವೈರಲ್ ಆಗಿದೆ. ಈ ಸರಣಿಯಲ್ಲಿ ಇಮ್ರಾನ್ ನಟಿ ಮೌನಿ ಅವರನ್ನು ಚುಂಬಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ.
ಕೆಲ ದಿನಗಳ ಹಿಂದೆ ‘ಶೋಟೈಮ್’ ಸೀರಿಸ್ನ ಟ್ರೈಲರ್ ಬಿಡುಗಡೆಯಾಗಿದೆ. ಈ ಸರಣಿಯು ಬಾಲಿವುಡ್‌ನ ಕರಾಳ ರಹಸ್ಯಗಳನ್ನು ಆಧರಿಸಿದೆ ಎನ್ನಲಾಗಿದೆ. ತೆರೆಮರೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬಂತಹ ಹಲವು ಸಂಗತಿಗಳನ್ನು ‘ಶೋಟೈಮ್’ ಸೀರಿಸ್ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಬಾಲಿವುಡ್ ತುಂಬಾ ಕರಾಳವಾಗಿದೆ ಎನ್ನುವ ಮಾತಿದೆ. ಅದಕ್ಕೆ ಪೂರಕವಾಗಿದೆ ಈ ಸೀರಿಸ್.
ಇಮ್ರಾನ್, ಮೌನಿ ಜೊತೆ ಮಹಿಮಾ ಮಕ್ವಾನಾ, ರಾಜೀವ್ ಖಂಡೇಲ್ವಾಲ್, ಶ್ರಿಯಾ ಶರನ್, ವಿಶಾಲ್ ವಶಿಷ್ಠ, ನೀರಜ್ ಮಾಧವ್, ವಿಜಯ್ ರಾಜ್ ಮತ್ತು ನಾಸಿರುದ್ದೀನ್ ಶಾ ಈ ಸರಣಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರಣಿಯ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
Advertisement. Scroll to continue reading.
‘ಶೋಟೈಮ್’ ವೆಬ್ ಸರಣಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. ಈ ಸರಣಿಯನ್ನು ಮಾರ್ಚ್ 8 ರಿಂದ ವೀಕ್ಷಣೆ ಮಾಡಬಹದು. ಈ ಸರಣಿಯನ್ನು ಮಿಹಿರ್ ದೇಸಾಯಿ ಮತ್ತು ಅರ್ಚಿತ್ ಕುಮಾರ್ ನಿರ್ದೇಶಿಸಿದ್ದಾರೆ.