ಕ್ರೀಡೆ

TEST CRICKET: ಆಟಗಾರರಿಗೆ ಭರ್ಜರಿ ಬೋನಸ್ ಘೋಷಿಸಿದ ಬಿಸಿಸಿಐ

0

ಧರ್ಮಶಾಲಾ: ಧರ್ಮಶಾಲಾದಲ್ಲಿ ನಡೆದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ, ಇನಿಂಗ್ಸ್ ಹಾಗೂ 64 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು  ಸೋಲಿಸಿದ ಬೆನ್ನಲ್ಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ಟೆಸ್ಟ್ ಕ್ರಿಕೆಟ್ ಅನ್ನು ಉತ್ತೇಜಿಸುವ ಸಲುವಾಗಿ ಬಿಸಿಸಿಐ ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹಧನ ಯೋಜನೆಯನ್ನು (Test Cricket Incentive Scheme) ಪ್ರಾರಂಭಿಸಿರುವುದಾಗಿ ಜಯ್ ಶಾ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಈ ಕುರಿತು ಅಂತಿಮ ಟೆಸ್ಟ್ ಪಂದ್ಯ ಮುಗಿಯುತ್ತಿದ್ದಂತೆ ಜಯ್ ಶಾ ಅವರು ಟ್ವೀಟ್ ಮಾಡುವ ಮೂಲಕ ಈ ಯೋಜನೆ ಪ್ರಕಟಿಸಿದ್ದು, ಕ್ರಿಕೆಟಿಗರಿಗೆ ಇನ್ಸೆಂಟಿವ್ ಘೋಷಣೆ ಮಾಡಿದ್ದಾರೆ.

Advertisement. Scroll to continue reading.

ಪ್ರಸ್ತುತ ಭಾರತದಲ್ಲಿ ಟೆಸ್ಟ್‌ ಪಂದ್ಯವೊಂದಕ್ಕೆ ಆಟಗಾರರಿಗೆ ಲಭಿಸುವ ವೇತನ 15 ಲಕ್ಷ ರೂ. ಐಪಿಎಲ್‌ ಬಳಿಕ ಒಂದು ಋತುವಿನ ಎಲ್ಲ ಟೆಸ್ಟ್‌ ಸರಣಿಗಳನ್ನು ಆಡುವ ಆಟಗಾರರಿಗೆ ಬೋನಸ್‌ ರೂಪದ ನೂತನ ಮಾದರಿಯಲ್ಲಿ ವಿಶೇಷ ವೇತನ ಘೋಷಣೆ ಮಾಡಲಾಗಿದೆ. ಉದಾಹರಣೆಗೆ ಒಂಬತ್ತು-ಪಂದ್ಯಗಳ ಋತುವಿನಲ್ಲಿ ಕನಿಷ್ಠ 5ರಿಂದ 6 ಟೆಸ್ಟ್‌ಗಳನ್ನು ಆಡುವ ಆಟಗಾರರು ಪ್ರತಿ ಪಂದ್ಯಕ್ಕೆ 15 ಲಕ್ಷದ ಬದಲಾಗಿ ಇನ್ನು ಮುಂದೆ ಪ್ರತಿ ಪಂದ್ಯಕ್ಕೆ 30 ಲಕ್ಷ ಪಡೆಯಲಿದ್ದಾರೆ.

ಹಾಗೆಯೇ ವರ್ಷವೊಂದರಲ್ಲಿ ಕನಿಷ್ಠ 75 ಪ್ರತಿಶತ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಬ್ಬ ಆಟಗಾರನ ವೇತನವು ಪ್ರತಿ ಪಂದ್ಯಕ್ಕೆ 22.5 ಲಕ್ಷದಿಂದ 45 ಲಕ್ಷಕ್ಕೆ ದ್ವಿಗುಣಗೊಂಡಿದೆ. ವರ್ಷದ ಎಲ್ಲ ಟೆಸ್ಟ್‌ ಸರಣಿಗಳಲ್ಲಿ ಪಾಲ್ಗೊಳ್ಳುವ ಆಟಗಾರರಿಗಷ್ಟೇ ಇದು ಅನ್ವಯವಾಗುತ್ತದೆ.

ಟೆಸ್ಟ್ ಕ್ರಿಕೆಟ್ ಉತ್ತೇಜನಕ್ಕೆ ಬಿಸಿಸಿಐನಿಂದ ಕ್ರಮ

ಆಟಗಾರರು ಟೆಸ್ಟ್‌ ಕ್ರಿಕೆಟ್‌ನತ್ತ ಹೆಚ್ಚಿನ ಆಸಕ್ತಿ ವಹಿಸಬೇಕು, ಹೆಚ್ಚೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಬೇಕು, ಸಾಂಪ್ರದಾಯಿಕ ಕ್ರಿಕೆಟನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು ಎನ್ನುವುದು ಇದರ ಉದ್ದೇಶ ಎಂದು ಜಯ್​ ಶಾ ಅವರು ಹೇಳಿದರು. ಜಯ್​ ಶಾ ಅವರು ಬಿಸಿಸಿಐ ಕಾರ್ಯದರ್ಶಿಯಾದ ಬಳಿಕ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರಲ್ಲಿ ಮಹಿಳಾ ಕ್ರಿಕೆಟ್​ ಲೀಗ್​ ಮತ್ತು ಮಹಿಳಾ ಕ್ರಿಕೆಟಿಗರಿಗೂ ಪುರುಷರಂತೆ ಸಮಾನವಾದ ವೇತನ ಪದ್ಧತಿ ಪ್ರಾಮುಖ್ಯವಾದದ್ದು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com