ಬೆಳಪು ಸ್ಪೋರ್ಟ್ಸ್ ಕ್ಲಬ್ : 2 ಅಂಗನವಾಡಿ ಕೇಂದ್ರಗಳಿಗೆ ಕುಡಿಯುವ ನೀರಿನ ಘಟಕ, ಕಪಾಟು ಹಸ್ತಾಂತರ
Published
1
ಕಾಪು : ಬೆಳಪು ಸ್ಪೋರ್ಟ್ಸ್ ಕ್ಲಬ್ ಇದರ ಮೂವತ್ತನೇ ವರ್ಷದ ವಾರ್ಷಿಕೋತ್ಸವ ಸಂಭ್ರಮೋತ್ಸವದ ಅಂಗವಾಗಿ 2024 ನೇ ಸಾಲಿನ ಸಾಮಾಜಿಕ ಕಾರ್ಯ ಚಟುವಟಿಕೆಯಾಗಿ ಬೆಳಪು ಗ್ರಾಮದ 2 ಅಂಗನವಾಡಿ ಕೇಂದ್ರಗಳಿಗೆ ಕುಡಿಯಲು ನೀರಿನ ಪರಿಶುದ್ಧ ಘಟಕದ ಉದ್ಘಾಟನೆ ಹಾಗೂ ಕಪಾಟು ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೆಳಪು ಸ್ಪೋರ್ಟ್ಸ್ ಕ್ಲಬ್ ನ ಹಿರಿಯ ಸದಸ್ಯರುಗಳಾದ ಅಲ್ತಾಫ್ ಅಬ್ದುಲ್ ಘನಿ, ಸಹೀದ್ ಅಂಜಲ್ ಬಟ್, ಖಾಲಿದ್ ಅಹಮ್ಮದ್, ಬೆಳಪು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶಾನಾವಾಝ್ ಫಝಲುದ್ದೀನ್, ಉಪಾಧ್ಯಕ್ಷ ಶಾಹಿದ್ ನವಾಝ್, ಕ್ಲಬ್‌ನ ಕಾರ್ಯದರ್ಶಿ ರಿಯಾನ್ ಅನ್ಸಾರ್, ಜೊತೆ ಕಾರ್ಯದರ್ಶಿ ಸಕ್ಲೆನ್ ಅಹಮ್ಮದ್, ಅಂಗನವಾಡಿ ಶಿಕ್ಷಕಿಯರಾದ ಪ್ರಿಯಾ, ಆಶಾಲತಾ ಉಪಸ್ಥಿತರಿದ್ದರು.