ನವದೆಹಲಿ: ಪ್ರವಾಸೋದ್ಯಮದಲ್ಲಿ ಕಳೆದ ಎರಡು ತಿಂಗಳಿಂದ ದೇಶದ ಗಮನ ಸೆಳೆದಿರುವ ಲಕ್ಷದ್ವೀಪದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ. ವರದಿ ಪ್ರಕಾರ 15.30 ರೂವರೆಗೂ ಬೆಲೆಯನ್ನು ತಗ್ಗಿಸಲಾಗಿದೆ. ಭಾರತದ ಇತಿಹಾಸದಲ್ಲೇ ಒಮ್ಮೆಗೇ ಇಷ್ಟು ಪ್ರಮಾಣದಲ್ಲಿ ಬೆಲೆ ಇಳಿಸಲಾಗಿರುವುದು ಇದೇ ಮೊದಲು.
ಇಷ್ಟು ದೊಡ್ಡಮಟ್ಟದಲ್ಲಿ ಬೆಲೆ ಇಳಿಕೆ ಬಳಿಕವೂ ಲಕ್ಷದ್ವೀಪದಲ್ಲಿ ಪೆಟ್ರೋಲ್ ಬೆಲೆ ದೇಶದ ಇತರ ಹಲವು ಸ್ಥಳಗಿಂತ ಹೆಚ್ಚೇ ಇದೆ. ಅಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಲು ಇನ್ಫ್ರಾ ಟ್ಯಾಕ್ಸ್ ಅನ್ನು ತಗ್ಗಿಸಿರುವುದು ಕಾರಣ. ಲಕ್ಷದ್ವೀಪದ ಕೆಲವೆಡೆ ಪೆಟ್ರೋಲ್ ಬೆಲೆ 15.30 ರು.ನಷ್ಟು ಇಳಿಕೆಯಾದರೆ, ಇನ್ನೂ ಕೆಲವೆಡೆ 5.2 ರು.ನಷ್ಟು ಕಡಿಮೆ ಆಗಿದೆ. ಈ ಇಳಿಕೆಯೊಂದಿಗೆ ಅಲ್ಲಿ ಪೆಟ್ರೋಲ್ ಬೆಲೆ 100.75 ರು. ಆಗಿದೆ. ಡೀಸಲ್ ಬೆಲೆ 95.71 ರು. ಆಗಿದೆ.
Advertisement. Scroll to continue reading.
ಪ್ರವಾಸೋದ್ಯಮ ಸ್ಥಳವಾಗಿರುವ ಲಕ್ಷದ್ವೀಪದಲ್ಲಿ ಪೆಟ್ರೋಲ್ ವಿತರಣೆಯ ಸೌಕರ್ಯ ಅಭಿವೃದ್ಧಿಪಡಿಸಲು ಆಗುವ ವೆಚ್ಚವನ್ನು ಭರಿಸಲು ಇಂಡಿಯನ್ ಆಯಿಲ್ ಕಳೆದ ಮೂರು ವರ್ಷಗಳಿಂದ ಲೀಟರ್ಗೆ 6.9 ರೂ ಹೆಚ್ಚುವರಿ ತೆರಿಗೆ ವಿಧಿಸಿತ್ತು. ಕವರತ್ತಿ ಮತ್ತು ಮಿನಿಕೋಯ್‌ನಿಂದ ಬೇರೆ ಬೇರೆ ಕಡೆ ಇಂಧನ ಸಾಗಿಸಲು ಮತ್ತು ವಿತರಿಸಲು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಆದ ವೆಚ್ಚವನ್ನು ಭರಿಸಲು ಈ ತೆರಿಗೆ ಹಾಕಲಾಗಿತ್ತು. ಈಗ ಈ ವೆಚ್ಚವನ್ನು ಪೂರ್ಣವಾಗಿ ಭರಿಸಲಾಗಿರುವುದರಿಂದ ಹೆಚ್ಚುವರಿ ತೆರಿಗೆಯನ್ನು ಹಿಂಪಡೆಯಲಾಗಿದೆ. ಈಗ ಲಕ್ಷದ್ವೀಪದ ಎಲ್ಲಾ ದ್ವೀಪ ಪ್ರದೇಶಗಳಿಗೂ ಸಮಾನವಾಗಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಇದೆ.
ಆಂಡ್ರಾಟ್ ಮತ್ತು ಕಲ್ಪೇನಿ ದ್ವೀಪಗಳಲ್ಲಿ 15.30 ರು.ನಷ್ಟು ಪೆಟ್ರೋಲ್ ಬೆಲೆ ಇಳಿಕೆಯಾಗಿದೆ. ಈ ಮುಂಚೆ ಇಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 116.13 ರೂ ಇತ್ತು. ಡೀಸಲ್ ಬೆಲೆ 111.04 ರೂ ಇತ್ತು. ಕರವತ್ತಿ ಮತ್ತು ಮಿನಿಕೋಯ್ನಲ್ಲಿ 5.2 ರೂನಷ್ಟು ತಗ್ಗಿದೆ. ಇಲ್ಲಿ ಪೆಟ್ರೋಲ್ ಬೆಲೆ ಈ ಮೊದಲು ಇಲ್ಲಿ 105.94 ರೂ ಇತ್ತು. ಡೀಸಲ್ ಬೆಲೆ 110.91 ರೂ ಇತ್ತು.
Advertisement. Scroll to continue reading.