ಬೆಂಗಳೂರು: ನಿಮಗೆ ಸಿನಿಮಾದಲ್ಲಿ ನಟಿಸುವ ಕನಸುಗಳಿದ್ದರೆ, ಅದಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ವೇದಿಕೆ ಕಲ್ಪಿಸಲಿದೆ. ಅದೂ ಯಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಟಾಕ್ಸಿಕ್ ಸಿನಿಮಾಗೆ ಆಡಿಷನ್ ಕರೆಯಲಾಗಿದೆ.
ಗೀತು ಮೋಹನ್ ದಾಸ್ – ಯಶ್ ಅವರ ‘ಟಾಕ್ಸಿಕ್ʼ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಸಟ್ಟೇರುವ ಮುನ್ನವೇ ಸದ್ದು ಮಾಡಿದೆ. ಒಂದಲ್ಲ ಒಂದು ಕಾರಣಕ್ಕೆ ಸಿನಿಮಾ ಸಿನಿವಲಯದಲ್ಲಿ ಸೌಂಡ್ ಮಾಡುತ್ತಲೇ ಇದೆ.
ಈಗಾಗಲೇ ಯಶ್ ಅವರ ‘ಟಾಕ್ಸಿಕ್ʼ ಸಿನಿಮಾದಲ್ಲಿನ ಪಾತ್ರವರ್ಗದ ಬಗ್ಗೆ ಸಾಕಷ್ಟು ವಿಚಾರ ಚರ್ಚೆಯಲ್ಲಿದೆ. ಬಿಟೌನ್ ನ ಸ್ಟಾರ್ ಕಲಾವಿದರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಪಟ್ಟಿಯಲ್ಲಿ ನಟಿ ಕರೀನಾ ಕಪೂರ್, ಶ್ರುತಿ ಹಾಸನ್ ಹಾಗೂ ಶಾರುಖ್ ಖಾನ್ ಅವರ ಹೆಸರು ಕೇಳಿ ಬಂದಿದೆ. ಆದರೆ ಯಾವುದು ಕೂಡ ಅಧಿಕೃತವಾಗಿಲ್ಲ.
Advertisement. Scroll to continue reading.
25 ರಿಂದ 75 ವರ್ಷದೊಳಗಿನ ಪುರುಷರು, 12ರಿಂದ 16 ವರ್ಷದೊಳಗಿನ ಮಕ್ಕಳು, 23ರಿಂದ 65 ವರ್ಷದೊಳಗಿನ ವಯಸ್ಸಿನ ಮಹಿಳೆಯರು ಮಾ.25 ರ ಒಳಗೆ ನಿಮ್ಮ ಪರಿಚಯದ ವಿಡಿಯೋ ಹಾಗೂ ನಿಮ್ಮ ಕಲೆಯ(ಅಭಿನಯ) ಒಂದು ನಿಮಿಷದ ವಿಡಿಯೋವನ್ನು 8618706590 ವಾಟ್ಸಪ್ ಸಂಖ್ಯೆಗೆ ಕಳುಹಿಸಬೇಕು.ಈ ಹಿಂದೆ ‘ಸಲಾರ್ʼ ಹಾಗೂ ‘ಕೆಜಿಎಫ್ -2ʼ ಸಿನಿಮಾಗಳಿಗೆ ಇದೇ ರೀತಿಯ ಅಡಿಷನ್ ಕರೆಯಲಾಗಿತ್ತು. ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.
Advertisement. Scroll to continue reading.