ನ್ಯೂಯಾರ್ಕ್: ಸಲಿಂಗ ಜೋಡಿಯಾಗಿ ಮದುವೆಯಾಗಲು ಹೊರಟು ಭಾರೀ ಸುದ್ದಿಯಾಗಿದ್ದ ಸಾಮಾಜಿಕ ಮಾಧ್ಯಮ ಇನ್ಫ್ಲ್ಯುಯೆನ್ಸರ್ ಗಳಾದ ಭಾರತ ಮೂಲದ ಅಂಜಲಿ ಚಕ್ರ ಮತ್ತು ಪಾಕಿಸ್ತಾನ ಮೂಲದ ಸೂಫಿ ಮಲಿಕ್ ಅವರ ಮದುವೆ ಮುರಿದುಬಿದ್ದಿದೆ!
2019ರಲ್ಲಿ ಸಲಿಂಗ ಸಂಬಂಧದಿಂದಾಗಿ ಇವರಿಬ್ಬರು ಸುದ್ದಿಯಲ್ಲಿದ್ದರು. ಆದರೆ ಇಷ್ಟು ವರ್ಷಗಳ ಪರಸ್ಪರ ಪ್ರೇಮವು ಬ್ರೇಕ್ ಅಪ್ನಲ್ಲಿ ಅಂತ್ಯಗೊಂಡಿದೆ.
ಸೂಫಿ ಮಲಿಕ್ ನನಗೆ ದ್ರೋಹ ಬಗೆದಳು. ಹೀಗಾಗಿ ನಮ್ಮ ಮದುವೆಯನ್ನು ರದ್ದು ಮಾಡುತ್ತಿದ್ದೇವೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಅಂಜಲಿ ಚಕ್ರ ಬರೆದುಕೊಂಡಿದ್ದಾರೆ.
Advertisement. Scroll to continue reading.
ನ್ಯೂಯಾರ್ಕ್ನಲ್ಲಿ ನೆಲೆಸಿರುವ ಅಂಜಲಿ, ಸೌತ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಈವೆಂಟ್ ಪ್ಲಾನರ್ ಆಗಿ ವೃತ್ತಿ ಮಾಡುತ್ತಿದ್ದಾರೆ. ಜತೆಗೆ ಪ್ರವಾಸ, ಸೌಂದರ್ಯ, ಈವೆಂಟ್ ಪ್ಲಾನಿಂಗ್ ಕುರಿತು ಬ್ಲಾಗ್ ಬರೆಯುತ್ತಾರೆ.
ಮದುವೆಗೆ ಕೆಲವೇ ವಾರಗಳಿರುವಂತೆ ನಾನು ಅಂಜಲಿಗೆ ದ್ರೋಹವೆಸಗಿ, ಗುರುತರ ತಪ್ಪು ಮಾಡಿದ್ದೇನೆ. ನನ್ನ ತಿಳಿವಳಿಕೆ ಮೀರಿ ಅವಳಿಗೆ ತುಂಬ ನೋಯಿಸಿದ್ದೇನೆ ಎಂದು ಇನ್ಸ್ಸ್ಟಾದಲ್ಲಿ ಸೂಫಿ ಮಲಿಕ್ ಬರೆದುಕೊಂಡಿದ್ದಾರೆ.
Advertisement. Scroll to continue reading.