ಮಂಗಳೂರಿನಲ್ಲಿ ‘ನಮೋ’ ರಣಕಹಳೆ; ಲಕ್ಷಾಂತರ ಅಭಿಮಾನಿಗಳ ಜೈಕಾರ
Published
0
ಮಂಗಳೂರು: ಲೋಕಸಭೆ ಚುನಾವಣೆ 2024 ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಮಂಗಳೂರಿನಲ್ಲಿ ಬೃಹತ್ ರೋಡ್ ಶೋ ಕೈಗೊಂಡರು. ರೋಡ್ ಶೋ ಗೂ ಮೊದಲು ನಾರಾಯಣ ಗುರು ವೃತ್ತದಲ್ಲಿ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಅಲ್ಲಿಂದಲೇ ರೋಡ್‌ಶೋ ಆರಂಭವಾಯಿತು. ಎಂ.ಜಿ.ರಸ್ತೆ , ಲಾಲ್‌ಭಾಗ್, ಬಲ್ಲಾಳ್‌ಬಾಗ್, ಬೆಸೆಂಟ್, ಪಿ.ವಿ.ಎಸ್. ಮೂಲಕ ಸಾಗಿ ಮಂಜೇಶ್ವರ ಗೋವಿಂದ ಪೈ ಸರ್ಕಲ್ ಮೂಲಕ 2 ಕಿ.ಮೀ ಸಾಗಿತು.
ತೆರೆದ ವಾಹನದಲ್ಲಿ ಮೋದಿ ಎಡ ಭಾಗದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಹಾಗೂ ಬಲ ಭಾಗದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ನಿಂತಿದ್ದರು. ಮಾರ್ಗ ಉದ್ದಕ್ಕೂ ಬಿಜೆಪಿ ಲೋಗೋ ಹಿಡಿದು ಜನರಿಗೆ ತೋರಿಸುತ್ತಾ ಮೋದಿ ಕೈಬೀಸಿದರು. ರಸ್ತೆಯ ಉದ್ದಗಲಕ್ಕೂ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿದ್ದರು. ದಾರಿಯುದ್ದಕ್ಕೂ ಮೋದಿ ಮೇಲೆ ಹೂ ಚೆಲ್ಲುತ್ತಿದ್ದರು. ಜೈಕಾರ ಕೂಗುತ್ತಿದ್ದರು. ಹುಲಿ ಕುಣಿತ, ಕರಾವಳಿಯ ಸೊಬಗ ಸಾಗುವ ನೃತ್ಯಗಳು ಮೂಲಕ ಪ್ರಧಾನಿಯವರನ್ನು ಸ್ವಾಗತಿಸಲಾಯಿತು.
2 ಶಿರ್ವ : ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಹಿಳಾ ಸಂಘ ‘ಧಾರಿಣಿ’ಯ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಿತಾ ಆಲ್ವ, ಯಶಸ್ಸು ಎನ್ನುವುದು ರಾತ್ರೋ ರಾತ್ರಿ...