ಕ್ರೀಡೆ

TEST RANKING: ಭಾರತ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಆಸ್ಟ್ರೇಲಿಯಾ

0

ಹೊಸದಲ್ಲಿ: ಐಸಿಸಿ ತನ್ನ ವಾರ್ಷಿಕ ತಂಡಗಳ ಶ್ರೇಯಾಂಕಗಳನ್ನು ಶುಕ್ರವಾರ ಪರಿಷ್ಕೃರಿಸಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತ ಆಸ್ಟ್ರೇಲಿಯಾ ತಂಡ ಪುರುಷರ ಟೆಸ್ಟ್ ತಂಡದ ರ‍್ಯಾಂಕಿಂಗ್‌ನಲ್ಲಿ ಭಾರತವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ. ಕಳೆದ ವರ್ಷ ದಿ ಓವಲ್‌ನಲ್ಲಿ ನಡೆದಿದ್ದ ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ವಿರುದ್ಧ 209 ರನ್‌ಗಳ ಅದ್ಭುತ ಗೆಲುವಿನ ಹಿನ್ನೆಲೆಯಲ್ಲಿ ಪ್ಯಾಟ್ ಕಮಿನ್ಸ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಟೆಸ್ಟ್‌ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.

124 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ ಅಗ್ರ ಸ್ಥಾನವನ್ನು ಅಲಂಕರಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ರನ್ನರ್ ಅಪ್ ಭಾರತ(120) ತಂಡ 4 ಅಂಕಗಳನ್ನು ಕಡಿಮೆ ಹೊಂದಿದೆ. ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ (105) ಖಾತೆಯಲ್ಲಿ 19 ಅಂಕಗಳು ಕಡಿಮೆ ಇವೆ. ಭಾರತ ತಂಡ ತನ್ನ ಅಗ್ರ ಸ್ಥಾನವನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿರುವುದು ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಏಕೈಕ ಬದಲಾವಣೆಯಾಗಿದೆ. ದಕ್ಷಿಣ ಆಫ್ರಿಕಾ (103), ನ್ಯೂಜಿಲೆಂಡ್ (96), ಪಾಕಿಸ್ತಾನ (89), ಶ್ರೀಲಂಕಾ (83), ವೆಸ್ಟ್ ಇಂಡೀಸ್ (82) ಮತ್ತು ಬಾಂಗ್ಲಾದೇಶ (53) ಕ್ರಮವಾಗಿ 4ರಿಂದ 9ನೇ ಸ್ಥಾನಗಳಲ್ಲಿವೆ.

ಏಕದಿನದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿರುವ ಭಾರತ

ಭಾರತ (120 ಅಂಕಗಳು) ಟೆಸ್ಟ್ ತಂಡದ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿರಬಹುದು, ಆದರೆ ಎರಡೂ ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ (116) ತಂಡಕ್ಕಿಂತ 6 ಅಂಕಗಳನ್ನು ಹೆಚ್ಚಾಗಿ ಹೊಂದಿದೆ. ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ (112) ಆಸ್ಟ್ರೇಲಿಯಾ ತಂಡಕ್ಕಿಂತ ಕೇವಲ ನಾಲ್ಕು ರೇಟಿಂಗ್ ಪಾಯಿಂಟ್‌ಗಳ ಅಂತರವನ್ನು ಹೊಂದಿದ್ದರೆ, ಪಾಕಿಸ್ತಾನ (106) ಮತ್ತು ನ್ಯೂಜಿಲೆಂಡ್ (101) ಅಗ್ರ ಐದು ಸ್ಥಾನಗಳನ್ನು ಅಲಂಕರಿಸಿವೆ.

Advertisement. Scroll to continue reading.

ಟಿ20ಯಲ್ಲೂ ಭಾರತ ನಂಬರ್ ವನ್

ಇನ್ನು ಟಿ20 ಶ್ರೇಯಾಂಕದಲ್ಲಿ ಭಾರತ ತಂಡ ಅಗ್ರ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ ತಂಡವನ್ನು ಹಿಂದಿಕ್ಕಿ ಆಸ್ಟ್ರೇಲಿಯಾ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಈ ಎರಡೂ ತಂಡಗಳು ಭಾರತ ತಂಡಕ್ಕಿಂತ 7 ಅಂಕಗಳ ವ್ಯತ್ಯಾಸವನ್ನು ಹೊಂದಿವೆ. ಭಾರತ ತಂಡ 264 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡವಿದ್ದರೆ, ನಂತರದ ಸ್ಥಾನಗಳಲ್ಲಿ ನ್ಯೂಜಿಲೆಂಡ್‌, ವೆಸ್ಟ್ ಇಂಡೀಸ್‌ ತಂಡಗಳಿವೆ. ಇನ್ನು ಪಾಕಿಸ್ತಾನ ತಂಡ ಎರಡು ಸ್ಥಾನಗಳಲ್ಲಿ ಕುಸಿತ ಕಂಡು ಏಳನೇ ಸ್ಥಾನಕ್ಕೆ ಇಳಿದಿದೆ. ಸ್ಕಾಟ್ಲೆಂಡ್‌ ತಂಡ ಜಿಂಬಾಬ್ವೆಯನ್ನು ಹಿಂದಿಕ್ಕಿ 12ನೇ ಸ್ಥಾನಕ್ಕೇರಿದೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com