ಶಿರ್ವ : ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಹಿಳಾ ಸಂಘ ‘ಧಾರಿಣಿ’ಯ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಿತಾ ಆಲ್ವ, ಯಶಸ್ಸು ಎನ್ನುವುದು ರಾತ್ರೋ ರಾತ್ರಿ ದೊರೆಯುವಂಥದ್ದು ಅಲ್ಲ. ಅದಕ್ಕೆ ಕಠಿಣ ಪರಿಶ್ರಮ ಬೇಕು ಎಂಬುದನ್ನು ಹಲವಾರು ಸಾಧಕ ಮಹಿಳೆಯರ ಉದಾಹರಣೆಯ ಮುಖಾಂತರ ತಿಳಿಸಿದರು. ಈಗಿನ ಹೆಣ್ಣು ಮಕ್ಕಳು ಯಾವ ರೀತಿ ಛಲ, ಧೈರ್ಯ ಮತ್ತು ಯಶಸ್ಸನ್ನು ಸಾಧಿಸಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ವೇದಿಕೆಯಲ್ಲಿ ಹಿರಿಯ ಉಪನ್ಯಾಸಕಿ ಮರಿಯಾ ಜೇಸಿಂತಾ ಪುರ್ಟಾಡೋ , ಮಹಿಳಾ ಸಂಘದ ಮಾರ್ಗದರ್ಶಿ ಉಪನ್ಯಾಸಕಿ ಮಮತಾ ಡಿ, ಹಾಗೂ ವಿದ್ಯಾರ್ಥಿ ನಾಯಕಿ ಜೇನಿಶಿಯಾ ಕ್ಯಾಸ್ತಲಿನೋ ಉಪಸ್ಥಿತರಿದ್ದರು.
Advertisement. Scroll to continue reading.
ದೀಪಾ ಸ್ವಾಗತಿಸಿ, ಶರ್ಲಿ ಅತಿಥಿಗಳನ್ನು ಪರಿಚಯಿಸಿದರು. ಪ್ರಿಷ್ಮಾ ವಂದಿಸಿ, ಪೂರ್ವಿ ಕಾರ್ಯಕ್ರಮ ನಿರೂಪಿಸಿದರು.