ಯುವವಾಹಿನಿ ಉಡುಪಿ ಘಟಕದ ತಲೆಗೊಂದು ಸೂರು ಯೋಜನೆಯ ಐದನೇ ಮನೆಗೆ ಶಿಲಾನ್ಯಾಸ
Published
0
ಉಡುಪಿ : ಯುವವಾಹಿನಿ ಉಡುಪಿ ಘಟಕದ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾದ ತಲೆಗೊಂದು ಸೂರು ಯೋಜನೆಯ ಐದನೆಯ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಕಡೆಕಾರಿನ ಲಯನ್ಸ್ ಕಾಲೋನಿಯಲ್ಲಿ ನಡೆಯಿತು. ಶ್ರೀಮತಿ ಆಶಾ ಎಂಬವರಿಗೆ ಕಟ್ಟಿಸಿಕೊಡಲಾಗುತ್ತಿರುವ ಮನೆಗೆ ಶಿಲಾನ್ಯಾಸ ವನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ. ರಾಜಾರಾಮ್ ಹಾಗೂ ಉಡುಪಿ ಘಟಕದ ಅಧ್ಯಕ್ಷರಾದ ಜಗದೀಶ್ ಕುಮಾರ್ ರವರು ಜಂಟಿಯಾಗಿ ನೆರವೇರಿಸಿದರು.