Uncategorized

ಸೌದಿ ಅರೇಬಿಯಾದಲ್ಲಿನ ಭಾರತೀಯರಿಗೆ ಬಿಗ್ ಶಾಕ್; ಸೌದಿಯಲ್ಲಿ ಜಾರಿಯಾಗಲಿದೆ ಹೊಸ ಉದ್ಯೋಗ ನೀತಿ

0

ಸೌದಿ ಅರೇಬಿಯಾ : ಕೊರೋನಾ ಮಹಾಮಾರಿಯಿಂದಾಗಿ ಎಲ್ಲಾ ರಾಷ್ಟ್ರಗಳು ಸಂಕಷ್ಟಕ್ಕೆ ಒಳಗಾಗಿವೆ. ಭಾರತವೂ ಹೊರತಾಗಿಲ್ಲ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಹಲವು ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಈ ನಡುವೆ ಇದೀಗ ಸೌದಿ ಅರೇಬಿಯಾದಲ್ಲಿರುವ ಭಾರತೀಯರಿಗೆ ಸಂಕಷ್ಟ ಎದುರಾಗಿದೆ.
ಸೌದಿ ಅರೇಬಿಯಾದಲ್ಲಿ ಹೊಸ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಸ್ವದೇಶಿಕರಣಕ್ಕೆ ಸೌದಿ ಒತ್ತು ನೀಡುತ್ತಿರೋ ಹಿನ್ನೆಲೆಯಲ್ಲಿ ಭಾರತೀಯರೇ ಹೆಚ್ಚಾಗಿ ದುಡಿಯುತ್ತಿರುವ ಹೋಟೆಲ್, ಮಾಲ್ , ರೆಸ್ಟೋರೆಂಟ್ ಹಾಗೂ ಹೈಪರ್ ಮಾರ್ಕೇಟ್ ಮಾರ್ಕೇಟ್ ಗಳಲ್ಲಿ ಆರಂಭಿಕ ಹಂತದಲ್ಲಿ ಸೌದಿ ನಿವಾಸಿಗಳನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವಂತೆ ಸೌದಿ ಅರೇಬಿಯಾದ ಸಚಿವಾಲಯ ಸೂಚನೆಯನ್ನು ನೀಡಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಸಹಜವಾಗೆ ಇದು ಸೌದಿಯಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಗೆ ಶಾಕ್ ಕೊಟ್ಟಂತಾಗಿದೆ. ಸೌದಿ ನಿವಾಸಿಗಳಿಗೆ ಉದ್ಯೋಗದಲ್ಲಿ ಭದ್ರತೆಯನ್ನು ನೀಡುವುದರ ಜೊತೆಗೆ ಸರಕಾರಿ ಕಚೇರಿಗಳಲ್ಲಿನ ಉದ್ಯೋಗಕ್ಕೂ ಸ್ವದೇಶಿಗರನ್ನೇ ನೇಮಕ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಲಾಗಿದೆ. ಪದವಿ ಹಾಗೂ ಸ್ನಾಕೋತ್ತರ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಈಗಾಗಲೇ ಮುಂದಾಗಿದ್ದು, ಅರಬ್ ರಾಷ್ಟ್ರಗಳು ಒಂದೊಂದಾಗಿ ಸ್ವದೇಶಿಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರೋ ಬೆನ್ನಲ್ಲೇ ಇದೀಗ ಸೌದಿ ಅರೇಬಿಯಾವೂ ಅದೇ ಜಾಡು ಹಿಡಿದೆ.

https://diksoochinews.in/wp-content/uploads/2021/01/A-to-Z-ADD-1.mp4

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com