ಕುಂದಾಪುರ : ರಾಮ ಕ್ಷತ್ರಿಯ ಸಮಾಜದ ಅಭಿವೃದ್ಧಿಗೆ ಬಹಳಷ್ಟು ಕಾರ್ಯ : ಎಚ್.ಆರ್.ಶಶಿಧರ್ ನಾಯಕ್
Published
0
ರಾಮ ಕ್ಷತ್ರಿಯ ಸಮಾಜವನ್ನು ಇನ್ನೂ ಸಾಮಾಜಿಕವಾಗಿ ಸಂಘಟಿಸುವ ಸಲುವಾಗಿ ಇಪ್ಪತ್ತಾರು ವರ್ಷಗಳ ಹಿಂದೆ ಅಖಿಲ ಕರ್ನಾಟಕ ರಾಮ ಕ್ಷತ್ರಿಯ ಸಂಘ ಸ್ಥಾಪಿಸಿದ್ದು, ಸಮಾಜವನ್ನು ಸಂಘಟಿಸಿ, ಅದರ ಅಭಿವೃದ್ಧಿಯಲ್ಲಿ ಬಹಳಷ್ಟು ಕಾರ್ಯ ಮಾಡಿದ್ದೇವೆ ಎಂದು ವಿಶ್ವ ರಾಮ ಕ್ಷತ್ರಿಯ ಮಹಾ ಸಂಘದ ಅಧ್ಯಕ್ಷರಾದ ಎಚ್.ಆರ್.ಶಶಿಧರ್ ನಾಯಕ್ ಹೇಳಿದರು. ಅವರು ಕುಂದಾಪುರ ಪಾರಿಜಾತ ಸಭಾ ಭವನದಲ್ಲಿ ನಡೆದ ವಿಶ್ವ ರಾಮ ಕ್ಷತ್ರಿಯ ಮಹಾ ಸಂಘದ ನೂತನ ಪದಾಧಿಕಾರಿಗಳ ಸಭೆ ಹಾಗೂ ಪದಾಧಿಕಾರಿಗಳ ವಿಳಾಸ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
500 ವರ್ಷಗಳ ಹಿಂದೆ ಉತ್ತರದ ಮದ್ಯ ಪ್ರದೇಶ, ಗೋವಾದಲ್ಲಿ ನೆಲೆಸಿದ್ದ ವಿಶ್ವ ರಾಮ ಕ್ಷತ್ರಿಯರು ಪೆÇೀರ್ಚುಗೀಸರ ಆಳ್ವಿಕೆಯ ನಂತರ ದಕ್ಷಿಣಕ್ಕೆ ಬಂದು ಉತ್ತರ ಕನ್ನಡ, ಉಡುಪಿ, ದ.ಕ ಜಿಲ್ಲೆ ಹಾಗೆಯೇ ಕೇರಳದ ಬೇಕಲ್ ವರೆಗೆ ವಾಸ್ತವ್ಯ ಹೂಡಿದ್ದಾರೆ. ಇತ್ತೀಚೆಗೆ ನೂರು, ಇನ್ನೂರು ವರ್ಷಗಳಿಂದ ನಮ್ಮ ರಾಜ್ಯದ ಮಲೆನಾಡು, ಬಯಲು ಸೀಮೆ, ಬೆಂಗಳೂರು, ಮೈಸೂರಿನಲ್ಲೂ ವಾಸ್ತವ್ಯವಿದೆ. ಬಹಳ ಹಿಂದುಳಿದ ವರ್ಗವಾಗಿತ್ತು. ಆದರೆ, ಇತ್ತೀಚೆಗೆ ಬಹಳ ಶ್ರಮವಹಿಸಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಒಂದು ನೆಲೆಗೆ ಬರುತ್ತಿದ್ದೇವೆ. ಇದರಿಂದ ಬಹಳಷ್ಟು ಮಂದಿಗೆ ಉತ್ತಮ ಪ್ರಯೋಜನವಾಗಿದೆ. 12 ವರ್ಷಗಳ ನಂತರ ಗುರುಗಳಾದ ಶಿರಸಿಯ ಸ್ವರ್ಣಮಲೀಯ ಶ್ರೀ ಶ್ರೀ ಮದ್ ಗಂಗಾಧರೇಶ್ವರ ಸ್ವಾಮೀಜಿ ಯವರ ಆದೇಶದ ಮೇರೆಗೆ 2006 ನೇ ಇಸವಿಯಲ್ಲಿ ವಿಶ್ವ ರಾಮ ಕ್ಷತ್ರೀಯರ ಮಹಾಸಂಘ ಎಂಬ ಹೆಸರಿಗೆ ಬದಲಾಯಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯ ಮಾಡಲುಬದ್ಧರಾಗಿದ್ದೇವೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಪಿಎಸ್ ಮಾತನಾಡಿ, ವಿಶ್ವ ರಾಮ ಕ್ಷತ್ರಿಯ ಮಹಾ ಸಂಘಕ್ಕೆ ಶಶಿಧರ್ ನಾಯಕ್ ಅಧ್ಯಕ್ಷರಾಗಿದ್ದು, ಶೇಷಯ್ಯ ಕೋತ್ವಾಲ್ ಕಾರ್ಯಾಧ್ಯಕ್ಷರಾಗಿದ್ದಾರೆ. ಶ್ರೀಧರ್ ಪಿ.ಎಸ್ ಪ್ರಧಾನ ಕಾರ್ಯದರ್ಶಿಯಾಗಿ, ರಾಮಕೃಷ್ಣ ನಾಯಕ್ ಕೋಶಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಉಳಿದ ಪದಾಧಿಕಾರಿಗಳನ್ನೂ ನೇಮಿಸಲಾಗಿದೆ. ನಮ್ಮ ಸಮಾಜದಲ್ಲಿ ಚದುರಿರುವವರನ್ನು ಸಂಘಟಿಸಿ ಉಪಸಮಿತಿಗಳನ್ನು ರಚಿಸಿದ್ದೇವೆ. ಈ ಉಪಸಮಿತಿಗಳಿಂದಾಗಿ ತಳ ಮಟ್ಟದಲ್ಲಿರುವವರನ್ನು ಮೇಲೆ ತರುವ ಉದ್ದೇಶ ಮತ್ತು ಶೈಕ್ಷಣಿಕವಾಗಿ ಶಿಕ್ಷಣ, ಸೂರನ್ನು ಹೊಂದಬೇಕೆಂಬ ನೆಲೆಯಲ್ಲಿ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ನಮ್ಮ ಸಮಾಜದ ಧಾರ್ಮಿಕ ಆಚರಣೆಗಳನ್ನು ನಡೆಸಬೇಕೆಂಬ ಸದುದ್ದೇಶವಿದೆ. ವಿಶ್ವದಲ್ಲಿರುವ ಎಲ್ಲಾ ರಾಮ ಕ್ಷತ್ರೀಯ ಸಂಘಟನೆಗಳಿಗೆ ಮಾದರಿಯಾಗಿ, ಹೊಸ ಹುರುಪಿನಿಂದ ಹೊಸ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ವಿಶ್ವ ರಾಮಕ್ಷತ್ರಿಯ ಮಹಾ ಸಂಘ ಕಾರ್ಯಾಧ್ಯಕ್ಷ ಕೊತ್ವಾಲ್ ಶೇಷಯ್ಯ ಶೇರುಗಾರ್ , ಸಂಘದ ಕೋಶಾಧಿಕಾರಿ ರಾಮಕೃಷ್ಣ ನಾಯಕ್, ಸಂಘದ ಉಪಾಧ್ಯಕ್ಷರುಗಳಾದ ನಾಗರಾಜ್ ಕಾಮಧೇನು, ಶಿವರಾಮ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.