ಬಂಟ್ವಾಳ : ಶ್ರೀ ಅಂಬಿಕಾ ಮಿತ್ರ ಮಂಡಳಿ ದೇವಿ ನಗರ – ಮೋಂತಿಮಾರು ಆಶ್ರಯದಲ್ಲಿ ನಡೆದ ಶ್ರೀ ಅಂಬಿಕಾ ಟ್ರೋಫಿ – 2021 ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಅಂಬಿಕಾ ಮಿತ್ರ ಮಂಡಳಿ ವಿಜೇತರಾಗಿ ಹೊರ ಹೊಮ್ಮಿದರು. ನಮೋ ಬ್ರದರ್ಸ್ ಬೋಳಂಗಡಿ ಎ ರನ್ನರ್ಸ್ ಆಗಿ, ಕೈರಂಗಳ ತೃತೀಯ, ನಮೋ ಬ್ರದರ್ಸ್ ಬೋಳಂಗಡಿ ಬಿ ನಾಲ್ಕನೇ ಸ್ಥಾನ ಪಡೆದರು.