ಕೋಟ : ಹರಕೆ ಫಲಿಸಿದ ಹಿನ್ನೆಲೆ; ಕೋಟ ಅಮೃತೇಶ್ವರಿ ದೇವಳದಲ್ಲಿ ತುಲಾಭಾರ ಸೇವೆ ಸಲ್ಲಿಸಿದ ಮುಸ್ಲಿಂ ಮಹಿಳೆ
Published
0
ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಗುರುವಾರ ಮುಸ್ಲಿಂ ಮಹಿಳೆಯೊಬ್ಬರು ತುಲಾಭಾರ ಸೇವೆ ಸಲ್ಲಿಸಿದ್ದಾರೆ.
ಮೂಲತಃ ಮಣೂರು ಪಡುಕರೆಯವರಾಗಿದ್ದು, ಪ್ರಸ್ತುತ ಬ್ರಹ್ಮಾವರ ಸಮೀಪದ ಉಪ್ಪಿನಕೋಟೆಯಲ್ಲಿ ವಾಸವಿರುವ ಮಹಿಳೆ ಸಂತಾನಭಾಗ್ಯಕ್ಕಾಗಿ ಅಮ್ಮನಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಹರಕೆ ಹೊತ್ತಿದ್ದರು. ಅದರಂತೆ ಆಕೆ ಗಂಡು ಮಗುವಿಗೆ ಜನ್ಮವಿತ್ತಿದ್ದು, ಅದರ ಪ್ರಕಾರ ದೇವಳಕ್ಕೆ ಮಗುವಿನೊಂದಿಗೆ ಆಗಮಿಸಿ ಹರಕೆ ಸಲ್ಲಿಸಿದರು.
ವಿವಿಧ ಧರ್ಮದ ಜನರು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಶ್ರೀಕ್ಷೇತ್ರಕ್ಕೆ ಆಗಮಿಸುತ್ತಾರೆ. ಅದರಂತೆ ಯಕ್ಷಗಾನ ಸೇವೆ, ಹೂವಿನ ಪೂಜೆ, ಕುಂಕುಮಾರ್ಚನೆ, ಹರಿವಾಣ ನೈವೇದ್ಯ ಹೀಗೆ ಹಲವು ರೀತಿಯ ಹರಕೆಗಳನ್ನು ದೇವಳದಲ್ಲಿ ಮುಸ್ಲಿಂ, ಕ್ರೈಸ್ತರು ಸಲ್ಲಿಸುತ್ತಿದ್ದಾರೆ.