ಕುಂದಾಪುರ : ಗಿಳಿಯಾರಿನ ಸಮೀಪ ಗುಳ್ಳಾಡಿ ಗ್ರಾಮದಲ್ಲಿ ಮತ್ತೆ ಕೊಟ್ಟಿಗೆಗೆ ನುಗ್ಗಿ ಗೋ ಕಳ್ಳತನ !
Published
0
ಕುಂದಾಪುರ: ರಾತ್ರೋ ರಾತ್ರಿ ಕೊಟ್ಟಿಗೆಗೆ ನುಗ್ಗಿ ಗಬ್ಬದ ಗೋವನ್ನು ಗೋಕಳ್ಳರು ಕದ್ದಿರುವ ಘಟನೆ ಗುಳ್ಳಾಡಿ ಗ್ರಾಮದಲ್ಲಿ ನಡೆದಿದೆ. ಮಂಜಿ ಎನ್ನುವವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 3 ತಿಂಗಳ ಗರ್ಭ ಧರಿಸಿದ್ದ ಗೋ ವಿನ ಹಗ್ಗವನ್ನು ತುಂಡರಿಸಿ ಕದ್ದೊಯ್ಯಲಾಗಿದೆ.
ಮಂಜಿಯವರು ತೀರ ಬಡಕುಟುಂಬ ದವರಾಗಿದ್ದು ತಮ್ಮ ಸೊಸೆ ಮತ್ತು ಮೊಮ್ಮಗಳೊಂದಿದೆಗೆ ವಾಸವಿದ್ದು ತಮ್ಮ ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ನಂಬಿಕೊಂಡಿದ್ದು, ಈಗ ಇದ್ದ ಗೋವೂ ಕಳ್ಳತನವಾಗಿದೆ. ಈ ಕುರಿತು ಕೋಟ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧಿಸಲಾಗಿದೆ ಕಾಯ್ದೆ ಜಾರಿಯಾದ ನಂತರ ಗೋ ಕಳ್ಳತನ ಪ್ರಕರಣ ಹೆಚ್ಚುತ್ತಿದೆ. ಗೋ ಕಳ್ಳರಿಗೆ ಯಾವ ಕಾನೂನಿನ ಭಯವೂ ಇಲ್ಲದಾಗಿದೆ. ಲೋಕಲ್ ಗೋ ದಲ್ಲಾಳಿಗಂಳಿದಲೇ ಇಂತಹ ಪ್ರಕರಣ ಹೆಚ್ವುತ್ತಿದೆ. ಗೋ ಕಳ್ಳರನ್ನು 1 ವಾರದಲ್ಲಿ ಬಂಧಿಸಿ, ಈ ಭಾಗದಲ್ಲಿ ಗೋ ಕಳ್ಳತನವನ್ನು ಮಟ್ಟ ಹಾಕಬೇಕು ಎಂದು ಕೋಟ ಠಾಣಾಧಿಕಾರಿಗಳಲ್ಲಿ ಕುಂದಾಪುರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು ಮನವಿ ಮಾಡಿದ್ದಾರೆ.