Uncategorized

ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎಸ್. ಎಲ್ ಕರಣಿಕ್ ವಿಧಿವಶ

0

ಉಡುಪಿ : ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸುದೀರ್ಘ ಅವಧಿ ಸಸ್ಯಶಾಸ್ತ್ರ ಪ್ರಾಧ್ಯಾಪಕ , ವಿಭಾಗ ಮುಖ್ಯಸ್ಥ ಮತ್ತು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಸಸ್ಯಶಾಸ್ತ್ರಜ್ಞ ಡಾ.ಎಸ್.ಎಲ್ ಕರಣಿಕ್ (81 ವರ್ಷ) ಇಂದು ಮುಂಜಾನೆ ನಿಧನರಾಗಿದ್ದಾರೆ .

ಮೂಲತಃ ಕುಂದಾಪುರ ತಾಲೂಕಿನ ಸುಳ್ಸೆಯವರಾದ ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಮೃತರು ಪತ್ನಿ , ಇಬ್ಬರು ಹೆಣ್ಣು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ .

ವಿವಿಧ ಕ್ಷೇತ್ರಗಳಲ್ಲಿ ಸಾಧನೆ:

Advertisement. Scroll to continue reading.

ನಿವೃತ್ತಿಯ ಬಳಿಕ ಅದಮಾರು ಮಠದ ಪೂರ್ಣಪ್ರಜ್ಞ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿಯಾಗಿಯೂ ಬಹಳ ವರ್ಷ ಸೇವೆ ಸಲ್ಲಿಸಿದ್ದರು . ಸಸ್ಯ ಸಂಕುಲ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಜಾಗೃತಿ ಅಭಿಯಾನಗಳಲ್ಲಿ ಮಾರ್ಗದರ್ಶನ ನೀಡಿದ್ದರು .

ಶ್ರೀರಾಮಚಂದ್ರಾಪುರ ಮಠದ ವತಿಯಿಂದ ನಡೆದ ಭಾರತೀಯ ಗೋಯಾತ್ರೆ , ವಿಶ್ವಗೋಸಮ್ಮೇಳನ ಹಾಗೂ ಇನ್ನಿತರ ದೇಶಿ ಗೋರಕ್ಷಣೆಯ ಅಭಿಯಾನಗಳಲ್ಲಿ ಅತ್ಯಂತ ಸಕ್ರಿಯರಾಗಿ ಶ್ರಮಿಸಿದ್ದರು. ಹವ್ಯಕ ಪರಿಷತ್ ಉಡುಪಿಯ ಅಧ್ಯಕ್ಷ , ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಉಪಾಧ್ಯಕ್ಷ , ಕರಂಬಳ್ಳಿ ವೇಂಕಟರಮಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಮಲ್ಲಂಪಳ್ಳಿ ವಿಷ್ಣುಮೂರ್ತಿ ಕ್ಷೇತ್ರಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ಉಡುಪಿಯ ಪರ್ಯಾಯೋತ್ಸವಗಳಲ್ಲೂ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು .

ಗಣ್ಯರಿಂದ ಸಂತಾಪ :

ಎಸ್.ಎಲ್.ಕರಣಿಕ್ ನಿಧನಕ್ಕೆ ಅದಮಾರು ಉಭಯ ಶ್ರೀಗಳು , ಪೇಜಾವರ ಶ್ರೀಗಳು , ಶ್ರೀ ರಾಘವೇಶ್ವರ ಸ್ವಾಮೀಜಿ , ಶಾಸಕ ಕೆ ರಘುಪತಿ ಭಟ್ , ಬೈಕಾಡಿ ಸುಪ್ರಸಾದ ಶೆಟ್ಟಿ , ಹವ್ಯಕ ಪರಿಷತ್ ಉಡುಪಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಮೊದಲಾದವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ .

Advertisement. Scroll to continue reading.
https://diksoochinews.in/wp-content/uploads/2021/03/kaup-mariyamma-add..mp4

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com