Uncategorized

ಮಂಗಳೂರು: ಕೊರಗಜ್ಜ ಕ್ಷೇತ್ರ ಮಾಲಿನ್ಯ ಮಾಡಿದ ಓರ್ವನ ಸಾವು;ಇಬ್ಬರಿಂದ ತಪ್ಪು ಕಾಣಿಕೆ

0

ಮಂಗಳೂರು: ನಗರದ ಎಮ್ಮೆಕೆರೆಯಲ್ಲಿರುವ ಕೊರಗಜ್ಜನ ಕ್ಷೇತ್ರವನ್ನು ಮೂತ್ರ ಮಾಡಿ ಗಲೀಜು ಮಾಡಿದ್ದಲ್ಲದ್ದೆ ಲಕ್ಷಾಂತರ ಕೊರಗಜ್ಜನ ಭಕ್ತರಿಗೆ ನೋವುಂಟು ಮಾಡಿದ ಆರೋಪಿಗಳಿಗೆ ಕಾರಣಿಕ ಶಕ್ತಿ ಕೊರಗಜ್ಜನ ಮಹಿಮೆ ಅರಿವಾಗಿದ್ದು ,ಅಪರಾಧಿಗಳಲ್ಲಿ ಓರ್ವ ಹುಚ್ಚು ಹಿಡಿದು ಸಾವನ್ನಪ್ಪಿದ್ದರೆ,ಉಳಿದಿಬ್ಬರು ಪ್ರಾಣ ಭೀತಿಯಿಂದ ಬುಧವಾರ ಕ್ಷೇತ್ರದಲ್ಲಿ ಕೋಲ ನಡೆಯುವ ಸಂದರ್ಭ ಆಗಮಿಸಿ ಕೊರಗಜ್ಜನ ಮುಂದೆ ತಪ್ಪು ಕೇಳಿದ್ದಾರೆ.ಇನ್ನೋರ್ವ ಅಸೌಖ್ಯದಿಂದ ತಪ್ಪು ಕೇಳುವ ಕಾರ್ಯದಿಂದ ದೂರ ಉಳಿದಿದ್ದಾನೆ.


ಕಳೆದ ತಿಂಗಳು ಈ ಘಟನೆ ನಡೆದಿತ್ತು.ಬಳಿಕ ಹಿಂದೂ ಸಂಘಟನೆಗಳು ಕಾಲ್ನಡಿಗೆ ಜಾಥಾ ಸಹಿತ ಹಲವು ಕಾರ್ಯಕ್ರಮ ಹಮ್ಮಿಕೊಂಡು ಕ್ಷೇತ್ರಕ್ಕೆ ಅಪಚಾರ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿ ಎಂದು ಹರಕೆ ,ದೂರು ಸಲ್ಲಿದ್ದನ್ನು ಸ್ಮರಿಸಬಹುದು.ಕಾಕತಾಳೀಯ ಎಂಬಂತೆ ಓರ್ವ ಅಪರಾಧಿ ಮೂರ್ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ತಲೆಯನ್ನು ಗೋಡೆಗೆ ಬಡಿದುಕೊಂಡು ಮೃತಪಟ್ಟಿದ್ದಾನೆ.ಇದೀಗ ಕ್ಷೇತ್ರದ ಕಾರಣಿಕ ಗೋಚರಿಸಿದ್ದು ಅಪರಾಧಿಗಳು ದೈವದ ಮುಂದೆ ಕ್ಷಮಾಪಣೆಗೆ ಮುಂದಾಗಿದ್ದಾರೆ.

ಅಂದಾಜು 25-35ರ ಹರೆಯದ ಯುವಕರೇ ಗಲಬೆ ಸೃಷ್ಟಿಸುವ ಉದ್ದೇಶ ಇಲ್ಲವೇ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಬೇರೆ ಕೋಮಿನ ಒಟ್ಟು ಹದಿಮೂರು ಜನರ ತಂಡ ಕೊರಗಜ್ಜ ಕ್ಷೇತ್ರ ಅಪವಿತ್ರಗೊಳಿಸುವ ಈ ಕೃತ್ಯ ಎಸಗಿರುವುದು ಕಂಡು ಬಂದಿದ್ದು,ಕ್ಷಮಾಪಣೆ ಆದ ಕೂಡಲೇ ಪೊಲೀಸರ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com