ಚಂದನವನ : ಆ್ಯಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ರಿಯಲ್ ಸ್ಟಾರ್ ಉಪೇಂದ್ರ ತಲೆಗೆ ಪೆಟ್ಟಾಗಿದೆ. ಮಿನರ್ವಾದಲ್ಲಿ ಕಬ್ಜ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಫೈಟ್ ಸೀನ್ ಗಳನ್ನ ಸೆರೆ ಹಿಡಿಯಲಾಗುತ್ತಿದೆ. ಫೈಟರ್ ಒಬ್ಬ ಹಿಂದಿನಿಂದ ಉಪೇಂದ್ರರ ಮೇಲೆ ರಾಡ್ ನಿಂದ ಹಲ್ಲೆ ಮಾಡುವ ದೃಶ್ಯ ಚಿತ್ರೀರಣ ನಡೆಯುತ್ತಿತ್ತು. ಈ ವೇಳೆ ಫೈಟರ್ ಬೀಸಿದ ರಾಡ್ ನೇರವಾಗಿ ಉಪ್ಪಿಗೆ ತಲೆಗೆ ತಾಗಿದೆ. ಪೆಟ್ಟಾಗಿದ್ದು, ಸ್ವಲ್ಪ ಹೊತ್ತಿನಲ್ಲೇ ಚೇತರಿಸಿಕೊಂಡ ಉಪ್ಪಿ ಮುಂದಿನ ಶಾಟ್ ಗೆ ಸಿದ್ಧರಾದರು.
ಕಬ್ಜ ಚಿತ್ರ ಆರ್. ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಸ್ವತಃ ಚಂದ್ರು ನಿರ್ಮಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತವಿರಲಿದೆ. ಇನ್ನು ಚಿತ್ರಕ್ಕೆ ರಾಜಮೌಳಿ ತಂದೆ ಕಥೆ ಬರೆದಿರೋದು ವಿಶೇಷ. ಹಾಗೇ ಕಿಚ್ಚ ಸುದೀಪ್ ಚಿತ್ರದಲ್ಲಿರೋದು ಮತ್ತೊಂದು ವಿಶೇಷ.