ಬೈಂದೂರು : ಅನಾಥ ಗೋವುಗಳನ್ನು ಕದ್ದು,ಗೋ ಮಾಂಸ ಮಾಡುತ್ತಿದ್ದ ತಂಡದ ಓರ್ವನನ್ನು ಬಂಧಿಸಿರುವ ಘಟನೆ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಂಡ್ಲೂರು ನಿವಾಸಿ ಮುಜಾಫರ್ ಅಹಮ್ಮದ್ (24) ಬಂಧಿತ ಆರೋಪಿ. ಕಾರು ಚಾಲಕ ಸದಾಫ್, ವಾಯಿದ್, ಸಿಯಾನ್ ಪರಾರಿಯಾಗಿದ್ದಾರೆ.
ರಸ್ತೆ ಬದಿಯಲ್ಲಿ ಮಲಗುವ ಅನಾಥ ಗೋವುಗಳೇ ಈ ತಂಡದ ಟಾರ್ಗೆಟ್ ಆಗಿದ್ದು, ರಾತ್ರಿ ವೇಳೆ ಗೋವುಗಳಿಗೆ ಬ್ರೆಡ್ ಪೀಸ್ ಹಾಕಿ ಅವುಗಳನ್ನು ಕಾರಿಗೆ ತುಂಬಿಸಿಕೊಳ್ಳುವ ದುಷ್ಕೃತ್ಯವನ್ನು ಈ ತಂಡ ಮಾಡುತ್ತಿತ್ತು.
ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸ್ ಕಾರ್ಯಾಚರಣೆ ನಡೆಸಿದ್ದು, ಪೊಲೀಸ್ ರನ್ನು ನೋಡಿ ಭಯದಿಂದ ಗೋಕಳ್ಳರು ರಸ್ತೆ ಬದಿಯ ಡಿವೈಡರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಒಬ್ಬ ಸೆರೆ ಸಿಕ್ಕಿದ್ದಾನೆ. ಕೃತ್ಯಕ್ಕೆ ಬಳಸಲಾಗುತ್ತಿದ್ದ ಕೆಂಪು ಬಣ್ಣದ ಜೆನ್ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಗೋ ಕಳ್ಳತನ ಪ್ರಕರಣ ದಾಖಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
Advertisement. Scroll to continue reading.