ಕಾಲಿವುಡ್ ನಟ ವಿವೇಕ್ ರವರಿಗೆ ಹೃದಯಾಘಾತವಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. 59 ವರ್ಷದ ನಟ ವಿವೇಕ್ ಗುರುವಾರ ಕೋವಿಡ್ ಲಸಿಕೆ ಪಡೆದಿದ್ದರು. ಜೊತೆಗೆ ಸಾರ್ವಜನಿಕರಲಲೂ ಕೊರೋನಾ ಲಸಿಕೆ ಪೆಯುವಂತೆ ಮನವಿ ಮಾಡಿದ್ದರು.
ಕಳೆದ ವರ್ಷ ಬಾಲಿವುಡ್ ಸಿನಿಮಾ ವಿಕ್ಕಿ ಡೋನರ್ ನ ತಮಿಳು ರಿಮೇಕ್ ಚಿತ್ರ ಧಾರಳ ಪ್ರಭುವಿನಲ್ಲಿ ವಿವೇಕ್ ನಟಿಸಿದ್ದರು. ಸದ್ಯಕ್ಕೆ ಕಮಲ್ ಹಾಸನ್ ನಟನೆಯ ಇಂಡಿಯನ್-2 ಚಿತ್ರದಲ್ಲಿ ವಿವೇಕ್ ನಟಿಸುತ್ತಿದ್ದು, ಚಿತ್ರ ಸದ್ಯಕ್ಕೆ ನಿಂತಿದೆ.