ನವದೆಹಲಿ : ಲಾಕ್ ಡೌನ್ ಕೊನೆಯ ಆಯ್ಕೆಯಾಗಿ ಮಾತ್ರ ರಾಜ್ಯಗಳು ಪರಿಗಣಿಸಬೇಕು ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ದೇಶದದಲ್ಲಿ ಕೊರೋನಾರ್ಭಟ ಹೆಚ್ಚಾಗುತ್ತಿದೆ. ದೇಶದ ಜನತೆ ಸರ್ಕಾರ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ಕಾತುರದಿಂದ ಕಾಯುತ್ತಿತ್ತು. ಈ ಬಗ್ಗೆ ಜನತೆಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತಾಡಿದ್ದಾರೆ.
ಧೈರ್ಯ ಕಳೆದುಕೊಳ್ಳದಿರಿ
ಕೋರೋನಾ ಎರಡನೇ ಅಲೆ ಚಂಡಮಾರುತದಂತೆ ಬಂದಿದೆ. ಕೊರೋನಾದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ನನ್ನ ಸಂತಾಪವಿದೆ. ನಾನೂ ನಿಮ್ಮ ಕುಟುಂಬದ ದುಃಖದಲ್ಲಿ ಭಾಗಿ. ನಮ್ಮ ಮುಂದೆ ದೊಡ್ಡ ಸವಾಲಿದ್ದು, ಧೈರ್ಯ ಮತ್ತು ಸೂಕ್ತ ಸಿದ್ಧತೆಗಳಿಂದ ಹೋರಾಡಬೇಕಿದೆ. ಯಾರೂ ಧೈರ್ಯ ಕಳೆದುಕೊಳ್ಳಬೇಡಿ ಎಂದು ಮೋದಿ ಹೇಳಿದ್ದಾರೆ.
Advertisement. Scroll to continue reading.
ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ:
ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡುವ ಕಾರ್ಯ ನಡೆಯುತ್ತಿದ್ದು, ಕೆಲವು ನಗರಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಗಳನ್ನು ನೀಡಲಾಗುತ್ತದೆ ಎಂದರು.
ಲಾಕ್ ಡೌನ್ ರಾಜ್ಯದ ಕೊನೆಯ ಅಸ್ತ್ರವಾಗಲಿ :
ಕಾರ್ಮಿಕರು ಲಾಕ್ ಡೌನ್ ಭೀತಿಯಿಂದ ರಾಜ್ಯಗಳನ್ನು ತೊರೆಯದಿರಿ. ದೇಶದಲ್ಲಿ ಲಾಕ್ ಡೌನ್ ಅಗತ್ಯವಿಲ್ಲವಾಗಿದ್ದು, ರಾಜ್ಯಗಳು ಲಾಕ್ ಡೌನ್ ಕೊನೆಯ ಅಸ್ತ್ರವಾಗಿ ಪರಿಗಣಿಗಣಿಸಬೇಕು. ಮೈಕ್ರೋ ಕಂಟೇನ್ಮೆಂಟ್ ಝೋನ್ ಗಳ ನಿರ್ಮಾಣದ ಮೂಲಕ ಕೊರೋನಾ ನಿಯಂತ್ರಿಸಬೇಕೆಂದು ಸಲಹೆ ಇತ್ತಿದ್ದಾರೆ.
Advertisement. Scroll to continue reading.