Uncategorized

ಐಪಿಎಲ್: ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್; ಕೋಲ್ಕತ್ತಾವನ್ನು ಮಣಿಸಿದ ಡೆಲ್ಲಿ

0

ಅಹ್ಮದಾಬಾದ್ : ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿನ ನಗೆ ಬೀರಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ 7 ವಿಕೆಟ್ ಗಳ ಸುಲಭ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನಿಗದಿತ 20 ಓವರ್ ಗೆ 6 ವಿಕೆಟ ಕಳೆದುಕೊಂಡು 154 ರನ್ ಗಳಿಸಿತು. ಗುರಿ ಸಾಧಿಸಲು ಪಣ ತೊಟ್ಟ ಡೆಲ್ಲಿ ಕ್ಯಾಪಿಟಲ್ಸ್ 16.3 ಓವರ್ ಗಳಲ್ಲೇ 3 ವಿಕೆಟ್ ನಷ್ಟಕ್ಕೆ 156 ರನ್ ಬಾರಿಸಿ ಗೆದ್ದಿತು. ಪೃಥ್ವಿ ಶಾ 41 ಎಸೆತಗಳಲ್ಲಿ 82 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಶಿಖರ್ ಧವನ್ 46, ರಿಷಭ್ ಪಂತ್ 16, ಮಾರ್ಕಸ್ ಸ್ಟೋಯ್ನಿಸ್ 6 ರನ್ ಗಳಿಸಿ ಕೋಲ್ಕತ್ತಾ ನೀಡಿದ ಸವಾಲನ್ನು ಗೆದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ನ ಅಕ್ಷರ್ ಪಟೇಲ್, ಲಲಿತ್ ಯಾದವ್ ತಲಾ 2, ಆವೇಶ್ ಖಾನ್, ಮಾರ್ಕಸ್ ಸ್ಟೋಯ್ನಿಸ್ ತಲಾ 1 ವಿಕೆಟ್ ಪಡೆದರೆ, ಡೆಲ್ಲಿ ಇನ್ನಿಂಗ್ಸ್ ನಲ್ಲಿ ಕೋಲ್ಕತ್ತಾದ ಪ್ಯಾಟ್ ಕಮಿನ್ಸ್ 3 ವಿಕೆಟ್ ಕಬಳಿಸಿದರು.

ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಡೆಲ್ಲಿ

ಕೋಳ್ಕತ್ತಾ ವಿರುದ್ಧದ ಗೆಲುವಿನೊಂದಿಗೆ ಎರಡನೇ ಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಏರಿದೆ. 7 ಪಂದ್ಯಗಳಲ್ಲಿ 5 ಪಂದ್ಯ ಗೆದ್ದಿರುವ ಡೆಲ್ಲಿ 10 ಪಾಯಿಂಟ್ಸ್, +0.466 ನೆಟ್ ರನ್ ರೇಟ್ಸ್ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತೃತೀಯ ಸ್ಥಾನ, ಮುಂಬೈ ಇಂಡಿಯನ್ಸ್ 4 ನೇ ಸ್ಥಾನದಲ್ಲಿದೆ.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com