ವಿಜಯನಗರ : ತಮ್ಮ ಪೂರ್ವಜರ ಸ್ಮರಣಾರ್ಥ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಕೂಡ್ಲಿಗಿಯಲ್ಲಿ ಕಟುಂಬವೊಂದು 65 ಬಡ ಕುಟುಂಬಕ್ಕೆ ರೇಷನ್ ಕಿಟ್ ವಿತರಿಸಿ ಎಲ್ಲರ ಮೆಚ್ಚುಗೆ ಪಡೆದಿದೆ.
ಕೂಡ್ಲಿಗಿಯ ದಿವಂಗತ ಫಕ್ರುದ್ದೀನ್ ಸಾಬ್ ಅಬ್ದುಲ್, ಅಜ್ಮತ್ ಉಲ್ಲಾ,ಮಹಮ್ಮದ್ ಖಾಸಿಂ ಇವರ ತಮ್ಮಂದಿರಾದ ಕಾಂಟ್ರಾಕ್ಟರ್,ಇಸ್ಮಾಯಿಲ್, ರಹಮತ್ಲಾ, ಮಕ್ಕಳಾದ ಅಬ್ದುಲ್ ರಹ್ಮಾನ್, ಸಾಹೇಬ್ ಮಹಮ್ಮದ್ ಇಸಾಕ್ , ನಿಸಾರ್ ಅಹಮದ್ ಅಜ್ಮ್ ಬಾಷಾ, ಖಾದರ್ ಭಾಷಾ, ನಜೀರ್ ಅಹಮದ್ ಇಂದು ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ ತಮ್ಮ ಪೂರ್ವಜರ ಸ್ಮರಣಾರ್ಥ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ರಹ್ಮಾನ್ ಮಾತನಾಡಿ,ತಾವು ತಮ್ಮ ಸಹೋದರರೊಡಗೂಡಿ ಪೂರ್ವಜರ ಸ್ಮರಣಾರ್ಥವಾಗಿ ಬಡವರಿಗೆ ಆಹಾರದ ಕಿಟ್ ನೀಡೋಮೂಲಕ ಅತ್ತ್ಯಲ್ಪ ಸೇವೆ ಮಾಡುತಿದ್ದು. ಅಲ್ಲಾಹನು ಎಲ್ಲರನ್ನೂ ಕೊರೋನಾ ದಿಂದ ರಕ್ಷಿಸಲಿ,ಆ ಪರಮಾತ್ಮ ಸರ್ವರಿಗೂ ಒಳ್ಳೆಯದನ್ನೇ ಮಾಡಲಿ, ಪ್ರಪಂಚವನ್ನ ಕರೋನಾ ಮುಕ್ತಗೊಳಿಲೆಂದು ಸಂಕಲ್ಪ ತೊಟ್ಟು,ದೇವರಲ್ಲಿ ತಾವು ತಮ್ಮ ಕುಟುಂಬ ಸಮೇತರಾಗಿ ಪ್ರಾರ್ಥಿಸುತ್ತೇವೆ ಎಂದರು.
Advertisement. Scroll to continue reading.