ಬೆಂಗಳೂರು : ಕೊರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಎರಡನೇ ಅಲೆ ತೀವ್ರವಾಗಿದ್ದು, ಜನತಾ ಕರ್ಫ್ಯೂ ಪರಿಣಾಮ ಬೀರಿಲ್ಲ. ಹಾಗಾಗಿ ಮೇ 10 ರ 6 ಗಂಟೆಯಿಂದ ಕಂಪ್ಲೀಟ್ ಲಾಕ್ ಡೌನ್ ಮಾಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಸಚಿವ ಸಂಪುಟ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದು, ಮೇ 10 ರ ಬೆಳ್ಳಿಗ್ಗೆ 6 ಗಂಟೆಯಿಂದ ಮೇ 24 ರ 6 ಗಂಟೆ ವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅನಾವಶ್ಯಕ ತಿರುಗಾಟಕ್ಕೆ ಬ್ರೇಕ್ ನೀಡಲಾಗುತ್ತದೆ ಎಂದಿದ್ದಾರೆ.
ಏನಿಲ್ಲ..?
ಬಸ್ , ಕ್ಯಾಬ್,ಆಟೋ
Advertisement. Scroll to continue reading.
ಅಂತಾರಾಜ್ಯ, ಅಂತರ್ ಜಿಲ್ಲಾ ಪ್ರವಾಸ
ಐಟಿ ಕಂಪೆನಿಗಳು
ಬಾರ್, ಹೋಟೆಲ್, ರೆಸ್ಟೋರೆಂಟ್
ಸೆಲೂನ್, ಬ್ಯೂಟಿ ಪಾರ್ಲರ್
Advertisement. Scroll to continue reading.
ಗಾರ್ಮೆಂಟ್ಸ್
ಮನೋರಂಜನಾ ತಾಣಗಳು
ವಿವಾಹಕ್ಕೆ 50 ಜನಕ್ಕಿಂತ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ
ಏನಿದೆ..?
Advertisement. Scroll to continue reading.
ತುರ್ತುಸೇವೆಗಳು
ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುಮತಿ
ಹಾಲು, ಹಣ್ಣು, ಮಾಂಸದಂಗಡಿ
ಸರ್ಕಾರಿ ಕಛೇರಿಗಳು ಭಾಗಶಃ ಓಪನ್
Advertisement. Scroll to continue reading.
ಕಟ್ಟಡ ಕಾಮಗಾರಿ
ಹಾಲಿನ ಬೂತ್ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಓಪನ್
ಊರು ತೊರೆಯದಿರಲು ಮನವಿ
ಕಾರ್ಮಿಕರು ಭಯ ಪಡುವಂತಿಲ್ಲ. ಇದೊಂದು ತಾತ್ಕಾಲಿಕ ಕ್ರಮವಾಗಿದ್ದು, ಬೆಂಗಳೂರು ತೊರೆಯದಿರಿ ಎಂದು ಮನವಿ ಮಾಡಿದ್ದಾರೆ.
Advertisement. Scroll to continue reading.